October 5, 2026
Monday, October 5, 2026
spot_img

ಪ್ರವಾಹ ಪರಿಸ್ಥಿತಿ ಎದುರಾದ್ರೆ ಎಂದೂ ನೀರಿಗೆ ಇಳಿಯಬೇಡಿ, ಇನ್ನಷ್ಟು ಟಿಪ್ಸ್‌ ಇಲ್ಲಿದೆ ನೋಡಿ

ರಾಜ್ಯದಲ್ಲಿ ಮಳೆಯೇ ಬೀಲ್ತಾ ಇಲ್ಲ ಇನ್ನು ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗುವ ಸಾಧ್ಯತೆ ಎಲ್ಲಿದೆ ಅಂತೀರಾ? ನಿಸರ್ಗದ ಬಗ್ಗೆ ಇಂಥದ್ದೇ ವಿಷಯವನ್ನು ಹೀಗೇ ಆಗುತ್ತದೆ ಎಂದು ಹೇಳೋಕೇ ಆಗೋದಿಲ್ಲ. ಹೀಗಾಗಬಹುದು ಎಂದು ಅಂದುಕೊಳ್ಳಬಹುದು ಅಷ್ಟೆ. ನಿಮ್ಮ ಊರಿಗೆ ಪ್ರವಾಹವಾದ್ರೆ ಅಥವಾ ತಗ್ಗು ಪ್ರದೇಶದಲ್ಲಿರುವ ನಿಮ್ಮ ಮನೆಗೆ ನೀರು ನುಗ್ಗಿದ್ರೆ ಏನೆಲ್ಲಾ ಮಾಡಬೇಕು? ಏನು ಮಾಡಬಾರದು?

ಪ್ರವಾಹದ ನೀರಿನಲ್ಲಿ ನಡೆದುಕೊಂಡು ಹೋಗಿ ಇನ್ನೊಂದು ಬದಿಗೆ ರೀಚ್‌ ಆಗ್ತೀನಿ ಎನ್ನುವ ಸಾಹಸ ಮಾಡಬೇಡಿ. ನಿಮಗೆ ರಸ್ತೆಯ ಅಂದಾಜು ಇರಬಹುದು ಆದರೆ ನೀರಿನ ಅಂದಾಜು ಇರೋದಿಲ್ಲ. ಒಂದೇ ನಿಮಿಷದಲ್ಲಿ ನೀರಿನ ಮಟ್ಟ ಹೆಚ್ಚಾಗಬಹುದು. ಆರು ಇಂಚು ನೀರಿನಲ್ಲಿ ನೀವು ಮುಳುಗಿಹೋಗಬಹುದು ಜಾಗ್ರತೆ.

ಬ್ಯಾರಿಕೇಡ್‌ ಹಾಕಿರುವ ಜಾಗದ ಬಳಿ ಹೋಗಬೇಡಿ. ಎರಡು ಫೀಟ್‌ನಷ್ಟು ನೀರು ಮನೆಯ ಮುಂದೆ ನಿಲ್ಲಿಸಿರುವ ವೆಹಿಕಲ್‌ಗಳನ್ನು ಕಾರ್‌ಗಳನ್ನು ತೇಲುವಂತೆ ಮಾಡುತ್ತದೆ. ನೀವು ಪ್ರವಾಹದ ವೇಳೆ ಕಾರ್‌ನಲ್ಲಿದ್ದರೆ ಎರಡು ಫೀಟ್‌ನಷ್ಟು ನೀರಿದೆ ಎನ್ನುತ್ತಿದ್ದಂತೆಯೇ ಕಾರ್‌ನಿಂದ ಇಳಿದುಬಿಡಿ, ಎತ್ತರಡ ಪ್ರದೇಶಕ್ಕೆ ಹೋಗಿ ಜೀವ ಉಳಿಸಿಕೊಳ್ಳಿ.

ಮನೆಗೆ ನೀರು ನುಗ್ಗುತ್ತಿದೆ ಅಂತಾದ್ರೆ ಮೊದಲು ಟಿವಿ, ವಾಶಿಂಗ್‌ ಮಶೀನ್‌, ಫ್ರಿಡ್ಜ್‌ ಇನ್ನಿತರ ಎಲೆಕ್ಟ್ರಿಕ್‌ ಸಾಮಾಗ್ರಿಗಳ ಸ್ವಿಚ್‌ ಆಫ್‌ ಮಾಡಿ. ಮಹಡಿಗೆ ತಲುಪಿ.

ಬಾಗಿಲಿಲ್ಲದ ಮಹಡಿಯ ರೂಮ್‌ ಅಥವಾ ಅಟ್ಟದಲ್ಲಿ ಹೋಗಿ ಕೂರಬೇಡಿ. ನೀರು ಹೋಗಲು ಜಾಗವಿಲ್ಲದೆ ಉಸಿರುಗಟ್ಟುತ್ತೀರಿ.

ಪ್ರವಾಹದಲ್ಲಿ ಸಿಲುಕಿ ಸಹಾಯ ಬಯಸುತ್ತೀರಿ ಎಂದಾದರೆ ಗಾಢ ಬಣ್ಣದ ಬಟ್ಟೆಗಳನ್ನು ಧರಿಸಿ. ಇದು ನಿಮ್ಮನ್ನು ದೂರದಿಂದ ನೋಡಲು ಸಹಾಯ ಮಾಡುತ್ತದೆ.

ಪ್ರವಾಹದ ನೀರು ಮನೆಯೊಳಗೆ ಬಂದರೆ ಇದರಲ್ಲಿ ಕೊಳಚೆ, ಕೊಚ್ಚೆ, ಸೀವೇಜ್‌ ನೀರು ಮಿಕ್ಸ್‌ ಆಗಿರುತ್ತದೆ. ಮಕ್ಕಳಿಗೆ ಈ ನೀರಲ್ಲಿ ಆಡಲು ಬಿಡಬೇಡಿ.

Must Read