ಬ್ರಿಟನ್ ನೂತನ ಪ್ರಧಾನಿ ರಿಷಿ ಸುನಕ್ ಮೊದಲ ಮಾತು…!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಯುಕೆ ಪ್ರಧಾನಿಯಾಗಿ ರಿಷಿ ಸುನಕ್ ಆಯ್ಕೆಯಾಗಿದ್ದು, ತಮ್ಮ ಮೊದಲ ಭಾಷಣದಲ್ಲಿ ‘ಸಮಗ್ರತೆ ಮತ್ತು ವಿನಮ್ರತೆಯಿಂದ ಸೇವೆ ಸಲ್ಲಿಸುವುದಾಗಿ’ ಭರವಸೆ ನೀಡಿದ್ದಾರೆ.

ಕನ್ಸರ್ವೇಟಿವ್ ಪ್ರಧಾನ ಕಚೇರಿಯಲ್ಲಿ ಭಾಷಣ ಮಾಡಿದ ರಿಷಿ, ಯುಕೆ ಆಳವಾದ ಆರ್ಥಿಕ ಸವಾಲನ್ನು ಎದುರಿಸುತ್ತಿದೆ ಎಂದು ಹೇಳಿದರು.
ಇದೇ ವೇಳೆ ಲಿಜ್ ಟ್ರಸ್ ಅವರ ನಾಯಕತ್ವಕ್ಕಾಗಿ ಅವರಿಗೆ ಗೌರವ ಸಲ್ಲಿಸಿದರು. ಅವರು ‘ಅಸಾಧಾರಣವಾಗಿ ಕಷ್ಟಕರ ಪರಿಸ್ಥಿತಿಗಳಲ್ಲಿ’ ತಮ್ಮ ಪಾತ್ರವನ್ನ ನಿರ್ವಹಿಸಿದರು ಎಂದರು. ಕನ್ಸರ್ವೇಟಿವ್ ಮತ್ತು ಯೂನಿಯನಿಸ್ಟ್ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವುದಕ್ಕೆ ವಿನಮ್ರನಾಗಿದ್ದೇನೆ ಎಂದು ಸುನಕ್ ಹೇಳಿದರು.

ನಾನು ಪ್ರೀತಿಸುವ ಪಕ್ಷಕ್ಕೆ ಸೇವೆ ಸಲ್ಲಿಸಲು ಮತ್ತು ನಾನು ತುಂಬಾ ಋಣಿಯಾಗಿರುವ ದೇಶಕ್ಕೆ ಹಿಂದಿರುಗಿಸಲು ಸಾಧ್ಯವಾಗುವುದು ಜೀವನದ ಅತಿದೊಡ್ಡ ಸುಯೋಗವಾಗಿದೆ .

ನಾವು ಆಳವಾದ ಆರ್ಥಿಕ ಸವಾಲನ್ನು ಎದುರಿಸುವುದರಲ್ಲಿ ಯಾವುದೇ ಸಂದೇಹವಿಲ್ಲ. ನಮಗೆ ಈಗ ಸ್ಥಿರತೆ ಮತ್ತು ಏಕತೆಯ ಅಗತ್ಯವಿದೆ. ಮತ್ತು ನಮ್ಮ ಪಕ್ಷ ಮತ್ತು ನಮ್ಮ ದೇಶವನ್ನ ಒಗ್ಗೂಡಿಸುವುದು ನನ್ನ ಅತ್ಯಂತ ಆದ್ಯತೆಯಾಗಿದೆ. ಏಕೆಂದರೆ ನಾವು ಎದುರಿಸುತ್ತಿರುವ ಸವಾಲುಗಳನ್ನು ಮೆಟ್ಟಿನಿಂತು ನಮ್ಮ ಮಕ್ಕಳು ಮತ್ತು ಮೊಮ್ಮಕ್ಕಳಿಗೆ ಉತ್ತಮ, ಹೆಚ್ಚು ಸಮೃದ್ಧ ಭವಿಷ್ಯವನ್ನು ನಿರ್ಮಿಸುವ ಏಕೈಕ ಮಾರ್ಗ ಅದೊಂದೇ ಆಗಿದೆ’ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!