March 29, 2026
Sunday, March 29, 2026
spot_img

ಹೊಸ ಕೊರೊನಾ ರೂಪಾಂತರ ಟೆನ್ಷನ್: ಎಚ್ಚರಿಕೆಯಿಂದಿರಿ ಆದ್ರೆ ಭಯ ಬೇಡ ಎಂದ ತಜ್ಞರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೊರೊನಾ ವೈರಸ್ ಕುರಿತು ಮತ್ತೆ ಚರ್ಚೆ ಜೋರಾಗಿದೆ. ಅಮೆರಿಕ ಸೇರಿ ಹಲವು ದೇಶಗಳಲ್ಲಿ BA.3.2 ಎಂಬ ಹೊಸ ರೂಪಾಂತರ ಪತ್ತೆಯಾದ ಹಿನ್ನೆಲೆಯಲ್ಲಿ ಜನರಲ್ಲಿ ಆತಂಕ ಹೆಚ್ಚಾಗಿದೆ. COVID-19 ಸಮಯದ ಕಠಿಣ ಅನುಭವಗಳು ಮತ್ತೆ ನೆನಪಾಗುತ್ತಿರುವಂತಾಗಿದೆ.

BA.3.2 ಎಂಬುದು ಓಮಿಕ್ರಾನ್ ವಂಶದ ಹೊಸ ಉಪರೂಪವಾಗಿದ್ದು, ಮೊದಲು ದಕ್ಷಿಣ ಆಫ್ರಿಕಾದಲ್ಲಿ 2024ರ ನವೆಂಬರ್‌ನಲ್ಲಿ ಗುರುತಿಸಲಾಯಿತು. ಇದರ ಸ್ಪೈಕ್ ಪ್ರೋಟೀನ್‌ನಲ್ಲಿ ಹೆಚ್ಚಿನ ಸಂಖ್ಯೆಯ ರೂಪಾಂತರಗಳಿದ್ದು, ಹಿಂದಿನ ರೂಪಾಂತರಗಳಿಗಿಂತ ವಿಭಿನ್ನವಾಗಿದೆ. “ಸಿಕಾಡಾ” ಎಂಬ ಹೆಸರಿನಿಂದಲೂ ಇದನ್ನು ಕರೆಯಲಾಗುತ್ತಿದೆ.

ಯುನೈಟೆಡ್ ಸ್ಟೇಟ್ಸ್ ಸೇರಿದಂತೆ 23 ದೇಶಗಳಲ್ಲಿ ಈ ರೂಪಾಂತರ ಕಂಡುಬಂದಿದ್ದು, ಅಮೆರಿಕದಲ್ಲಿ ಕೆಲವು ಪ್ರಕರಣಗಳು ದೃಢಪಟ್ಟಿವೆ. ಆದರೆ ಆರೋಗ್ಯ ಸಂಸ್ಥೆಗಳ ಪ್ರಕಾರ, ಒಟ್ಟು ಪ್ರಕರಣಗಳಲ್ಲಿ ಇದರ ಪ್ರಮಾಣ ಅತಿ ಕಡಿಮೆ ಆಗಿದ್ದು, ವೇಗವಾಗಿ ಹರಡುವ ಲಕ್ಷಣ ಇನ್ನೂ ಕಂಡುಬಂದಿಲ್ಲ.

ಇದನ್ನೂ ಓದಿ:

ತಜ್ಞರು ತಿಳಿಸುವಂತೆ, ಈ ರೂಪಾಂತರದ ಲಕ್ಷಣಗಳು ಸಾಮಾನ್ಯ ಓಮಿಕ್ರಾನ್ ಸೋಂಕಿನಂತೆಯೇ ಇರುತ್ತವೆ. ಒಣ ಕೆಮ್ಮು, ಜ್ವರ, ಗಂಟಲು ನೋವು, ತಲೆನೋವು, ದೇಹದ ಆಯಾಸ ಮತ್ತು ಮೂಗು ಸಂಬಂಧಿತ ಸಮಸ್ಯೆಗಳು ಸಾಮಾನ್ಯ ಲಕ್ಷಣಗಳಾಗಿವೆ. ಕೆಲವರಿಗೆ ರುಚಿ ಹಾಗೂ ವಾಸನೆ ಕಡಿಮೆಯಾಗುವ ಸಮಸ್ಯೆಯೂ ಕಾಣಬಹುದು.

ಆರೋಗ್ಯ ತಜ್ಞರು ಆತಂಕಪಡಬೇಕಾದ ಅಗತ್ಯವಿಲ್ಲವೆಂದು ಹೇಳಿದರೂ, ಮುನ್ನೆಚ್ಚರಿಕೆ ಅಗತ್ಯವಿದೆ. ವಿಶೇಷವಾಗಿ ಪ್ರಯಾಣದ ಸಮಯದಲ್ಲಿ ಮಾಸ್ಕ್ ಧರಿಸುವುದು, ಸ್ವಚ್ಛತೆ ಕಾಪಾಡುವುದು ಮತ್ತು ಅಧಿಕೃತ ಮಾಹಿತಿಯನ್ನು ಮಾತ್ರ ನಂಬುವುದು ಮುಖ್ಯ ಎಂದು ಸಲಹೆ ನೀಡಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !