April 15, 2026
Wednesday, April 15, 2026
spot_img

ಜಾಗತಿಕ ಉದ್ವಿಗ್ನತೆ: ಮನ್ ಕಿ ಬಾತ್ ನಲ್ಲಿ ಇಂಧನ ಬಿಕ್ಕಟ್ಟಿನ ಎಚ್ಚರಿಕೆ ನೀಡಿದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮನ್ ಕಿ ಬಾತ್ ಕಾರ್ಯಕ್ರಮದ 132ನೇ ಸಂಚಿಕೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಇರಾನ್-ಇಸ್ರೇಲ್-ಅಮೆರಿಕ ನಡುವಿನ ಯುದ್ಧ ಪರಿಸ್ಥಿತಿಯು ಜಾಗತಿಕ ಮಟ್ಟದಲ್ಲಿ ಇಂಧನ ಬಿಕ್ಕಟ್ಟಿಗೆ ಕಾರಣವಾಗುತ್ತಿದೆ ಎಂದು ಹೇಳಿದ್ದಾರೆ.

ಯುದ್ಧ ನಡೆಯುತ್ತಿರುವ ದೇಶವು ಭಾರತದ ಇಂಧನ ಅಗತ್ಯಗಳಿಗೆ ಪ್ರಮುಖವಾಗಿರುವುದರಿಂದ ಪೆಟ್ರೋಲ್ ಹಾಗೂ ಡೀಸೆಲ್ ಸರಬರಾಜಿನ ಮೇಲೆ ಪರಿಣಾಮ ಬೀರುತ್ತಿದೆ ಎಂದರು. ಜೊತೆಗೆ ಇದು ಸವಾಲಿನ ಸಮಯವಾಗಿದ್ದು, ಭಾರತ ತನ್ನ ಜಾಗತಿಕ ಸಂಪರ್ಕಗಳು ಮತ್ತು ಸಾಮರ್ಥ್ಯಗಳ ನೆರವಿನಿಂದ ಈ ಸಂಕಷ್ಟವನ್ನು ಎದುರಿಸಬಹುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ದೇಶದ ಹಿತಾಸಕ್ತಿಗಾಗಿ ಎಲ್ಲರೂ ಒಂದಾಗಿ ನಿಲ್ಲಬೇಕು, ಈ ವಿಷಯವನ್ನು ರಾಜಕೀಯಗೊಳಿಸಬಾರದು ಎಂದು ಕರೆ ನೀಡಿದರು.

ಜನತೆಗೆ ಎಚ್ಚರಿಕೆ ನೀಡಿದ ಪ್ರಧಾನಿ, ವದಂತಿಗಳನ್ನು ನಂಬದೇ ಸರ್ಕಾರ ನೀಡುವ ಅಧಿಕೃತ ಮಾಹಿತಿಯನ್ನು ಮಾತ್ರ ಅನುಸರಿಸುವಂತೆ ಮನವಿ ಮಾಡಿದರು. ಹಿಂದಿನಂತೆ ಈ ಬಿಕ್ಕಟ್ಟನ್ನೂ ದೇಶದ ಜನರ ಒಗ್ಗಟ್ಟಿನಿಂದ ಸಮರ್ಥವಾಗಿ ಎದುರಿಸಬಹುದು ಎಂದು ಹೇಳಿದರು.

ಇದನ್ನೂ ಓದಿ:

ಗಲ್ಫ್ ರಾಷ್ಟ್ರಗಳಲ್ಲಿ ಕೆಲಸ ಮಾಡುತ್ತಿರುವ ಭಾರತೀಯರ ಸುರಕ್ಷತೆಗೆ ಸರ್ಕಾರ ಬದ್ಧವಾಗಿದ್ದು, ಅವರಿಗೆ ಸಹಕಾರ ನೀಡುತ್ತಿರುವ ದೇಶಗಳಿಗೆ ಮೋದಿ ಕೃತಜ್ಞತೆ ಸಲ್ಲಿಸಿದರು.

ಕೊವಿಡ್ ನಂತರ ಜಗತ್ತು ಸುಧಾರಣೆಯ ದಾರಿಗೆ ಬರುತ್ತದೆ ಎಂದು ನಿರೀಕ್ಷಿಸಲಾಗಿದ್ದರೂ, ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಯುದ್ಧಗಳು ಮತ್ತೆ ಜಾಗತಿಕ ಸ್ಥಿತಿಯನ್ನು ಅಸ್ಥಿರಗೊಳಿಸುತ್ತಿವೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !