ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೆಪ್ಟೆಂಬರ್ 18 ರಿಂದ 22 ರವರೆಗೆ ಕೇಂದ್ರ ಸರ್ಕಾರ ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆದಿದ್ದು ಈ ವೇಳೆ ಮೊದಲ ದಿನದ ಕಲಾಪ ಹಳೇ ಸಂಸತ್ತಿನಲ್ಲಿ ನಡೆಯಲಿದೆ. ಆದ್ರೆ ಸೆಪ್ಟೆಂಬರ್ 19 ರಿಂದ ಹೊಸ ಸಂಸತ್ತಿನಲ್ಲಿ ಅಧಿವೇಶನಗಳು ಪ್ರಾರಂಭವಾಗಲಿದೆ.
ಈ ಹಿನ್ನೆಲೆ ಸಂಸತ್ತಿನ ಸಿಬ್ಬಂದಿ ಹೊಸ ಡ್ರೆಸ್ ಕೋಡ್ ಧರಿಸಿ ನೂತನ ಸಂಸತ್ ಭವನಕ್ಕೆ ಹೋಗಲಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ನೆಹರು ಜಾಕೆಟ್, ಖಾಕಿ ಬಣ್ಣದ ಪ್ಯಾಂಟ್‌ಅನ್ನು ಅವರು ಉಡುಪಿನಲ್ಲಿ ಸೇರಿಸಲಾಗಿದೆ.
ಅಧಿಕಾರಿಗಳು ಮೆಜೆಂಟಾ ಅಥವಾ ಗಾಢ ಗುಲಾಬಿ ನೆಹರೂ ಜಾಕೆಟ್‌ಗಳನ್ನು ಧರಿಸುತ್ತಾರೆ. ಅವರ ಶರ್ಟ್ ಕೂಡ ಗಾಢ ಗುಲಾಬಿ ಬಣ್ಣದಲ್ಲಿ ಇರಲಿದ್ದು, ಅದರ ಮೇಲೆ ಕಮಲದ ಹೂವಿನ ವಿನ್ಯಾಸ ಇರಲಿದೆ.
New parliament new dress
Marshal and security officers dress. 2 https://t.co/VCXbn1Hfss pic.twitter.com/F526Gz1pWA
— Kumar Gaurav/कुमार गौरव (@kumarrgaurrav) September 12, 2023
ಇನ್ನು ಸಂಸತ್‌ನ ಮಾರ್ಷಲ್‌ಗಳು ಮಣಿಪುರಿ ಪೇಟ ಮತ್ತು ಭದ್ರತಾ ಸಿಬ್ಬಂದಿಗಳು ಸೇನೆಯ ರೀತಿಯ ಸಮವಸ್ತ್ರ ಧರಿಸಲಿದ್ದಾರೆ. ಈ ಸಮವಸ್ತ್ರವನ್ನು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ (ಎನ್‌ಐಎಫ್‌ಟಿ) ತಯಾರಿಸಿದೆ. ಉಭಯ ಸದನಗಳಲ್ಲಿನ ಮಾರ್ಷಲ್‌ಗಳ ಡ್ರೆಸ್ ಕೂಡ ಬದಲಾಯಿಸಲಾಗಿದೆ.
ಸೆಪ್ಟೆಂಬರ್ 18 ರಂದು ಪ್ರಾರಂಭವಾಗುವ ಸಂಸತ್ತಿನ ವಿಶೇಷ ಅಧಿವೇಶನವು ಹಳೆಯ ಕಟ್ಟಡದಲ್ಲಿ ಪ್ರಾರಂಭವಾಗಲಿದೆ ಮತ್ತು ಗಣೇಶ ಚತುರ್ಥಿಯ ಸಂದರ್ಭದಲ್ಲಿ ಒಂದು ದಿನದ ನಂತರ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ. ಈ ವರ್ಷದ ಮೇ 28 ರಂದು ಹೊಸ ಸಂಸತ್ ಕಟ್ಟಡವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದ್ದರು.