ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಮ್ ಇಂಡಿಯಾ ಮುಂದಿನ ಸರಣಿಗಳಿಗೆ ಸಜ್ಜಾಗುತ್ತಿದ್ದು, ಇದರ ಬೆನ್ನಲ್ಲೇ ಹೊಸ ಜೆರ್ಸಿಯನ್ನು ಅಡಿಡಾಸ್ ಕಂಪೆನಿ ಅನಾವರಣಗೊಳಿಸಿದೆ.
ಭಾರತದ ತಂಡದ ಹೊಸ ಕಿಟ್ ಪ್ರಾಯೋಜಕರಾಗಿರುವ ಅಡಿಡಾಟ್ ಟೆಸ್ಟ್, ಏಕದಿನ ಹಾಗೂ ಟಿ20 ಕ್ರಿಕೆಟ್ಗೆ ವಿಭಿನ್ನ ಜೆರ್ಸಿಯನ್ನು ವಿನ್ಯಾಸಗೊಳಿಸಿದೆ.
ಟೆಸ್ಟ್ ಕ್ರಿಕೆಟ್ನಲ್ಲಿ ಭಾರತ ತಂಡದ ಜೆರ್ಸಿ ಮೇಲೆ ಇನ್ಮುಂದೆ ನೀಲಿ ಬಣ್ಣದಲ್ಲಿ ಇಂಡಿಯಾ ಎಂಬ ಬರಹ ಕಾಣಿಸಿಕೊಳ್ಳಲಿದೆ. ಅಲ್ಲದೆ ತೋಳ್ಭಾಗದಲ್ಲಿ ಅಡಿಡಾಸ್ ಕಂಪೆನಿಯ ಲೋಗೋವನ್ನು ಪ್ರತಿನಿಧಿಸುವ ಪಟ್ಟಿಗಳನ್ನು ನೀಡಲಾಗಿದೆ.
ಏಕದಿನ ಕ್ರಿಕೆಟ್ನಲ್ಲಿ ಭಾರತ ತಂಡವು ತಿಳಿ ನೀಲಿ ಜೆರ್ಸಿಯನ್ನು ಧರಿಸಲಿದೆ. ಈ ಜೆರ್ಸಿಗೆ ಅಡಿಡಾಸ್ ಕಂಪೆನಿಯ ಲೋಗೋವನ್ನು ಪ್ರತಿನಿಧಿಸುವ ಬಿಳಿ ಪಟ್ಟಿಗಳನ್ನು ನೀಡಲಾಗಿದೆ.
ಅದೇ ರೀತಿ ಟಿ20 ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ವಿತ್ ಔಟ್ ಕಾಲರ್ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ. ಈ ಜೆರ್ಸಿಯನ್ನು ಕಡು ನೀಲಿ ಬಣ್ಣದಲ್ಲಿ ವಿನ್ಯಾಸಗೊಳಿಸಿರುವುದು ವಿಶೇಷ.