ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಡೀ ದೇಶವೇ ಕಾಂತಾರ ಸೀಕ್ವೆಲ್‌ಗಾಗಿ ಎದುರು ನೋಡುತ್ತಿದೆ. ಕಾಂತಾರ ಸಿನಿಮಾ ಇಡೀ ವಿಶ್ವವೇ ಕರ್ನಾಟಕದತ್ತ ತಿರುಗಿ ನೋಡುವಂತೆ ಮಾಡಿತ್ತು.
100 ದಿನಗಳ ಯಶಸ್ವಿ ಪ್ರದರ್ಶನ ಕಂಡ ಸಿನಿಮಾ ಏಕಾಏಕಿ ರಿಷಬ್ ಶೆಟ್ಟಿಯ ಜೀವನವನ್ನೂ ಬದಲಾಯಿಸಿತ್ತು. ಇದೀಗ ಸೀಕ್ವೆಲ್ ಬಗ್ಗೆ ಹೊಸ ಮಾಹಿತಿ ಸಿಕ್ಕಿದೆ.
ಕಾಂತಾರ ಸೀಕ್ವೆಲ್ 2024 ರ ಕಡೆಯಲ್ಲಿ ಬರುತ್ತದೆ ಎನ್ನಲಾಗಿದೆ. ಜೊತೆಗೆ ಶೂಟಿಂಗ್ ಸಂಪೂರ್ಣವಾಗಿ ಮಂಗಳೂರಿನಲ್ಲಿ ನಡೆಯಲಿದೆ ಎನ್ನಲಾಗಿದೆ. ಕಾಂತಾರ ಸಿನಿಮಾ ಶೂಟಿಂಗ್ ಕುಂದಾಪುರದಲ್ಲಿ ನಡೆದಿತ್ತು. ಇದೀಗ ಸೀಕ್ವೆಲ್ ಮಂಗಳೂರಿನಲ್ಲಿ ನಡೆಯಲಿದೆ ಎನ್ನಲಾಗಿದೆ.
ಕಾಣೆಯಾಗಿ ಊರನ್ನು ಕಾಯುವ ದೈವದ ಮುಂದಿನ ಕಥೆ ಏನು ಎನ್ನುವ ಬಗ್ಗೆ ಎಲ್ಲರೂ ಕಾತರರಾಗಿದ್ದಾರೆ.