ಹೊಸದಿಗಂತ ಶಿವಮೊಗ್ಗ ಆವೃತ್ತಿಯ ನೂತನ ಮುದ್ರಣಯಂತ್ರ ಲೋಕಾರ್ಪಣೆ

ಹೊಸದಿಗಂತ ವರದಿ ಶಿವಮೊಗ್ಗ :

ನಗರದ ಎನ್‌ಟಿ ರಸ್ತೆಯಲ್ಲಿನ ಹೊಸದಿಂಗತ ಪತ್ರಿಕೆಯ ಹೊಸ ಮುದ್ರಣ ವ್ಯವಸ್ಥೆಯನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ನಿರ್ಮಲ್‌ಕುಮಾರ್ ಸುರಾನ ಮಂಗಳವಾರ ಲೋಕಾರ್ಪಣೆ ಗೊಳಿಸಿದರು.

ಈ ಸಂದರ್ಭ ಮಾತನಾಡಿದ ಅವರು, ಹಿಂದೆಯೂ ಬೇರೆ ಬೇರೆ ಸಂಸ್ಥೆಗಳಲ್ಲಿ ಜವಾಬ್ದಾರಿ ನಿರ್ವಹಿಸಿದ್ದೇನೆ, ಆದರೆ ಹೊಸದಿಗಂತದಲ್ಲಿ ಸಿಕ್ಕಷ್ಟು ತೃಪ್ತಿ ಬೇರೆ ಕಡೆ ಸಿಗಲಿಲ್ಲ. ಹೊಸದಿಗಂತ ಪತ್ರಿಕೆ ಜನಪರವಾಗಿರುತ್ತದೆ. ಜನರ ಧ್ವನಿಯಾಗಿದೆ. ಇಲ್ಲಿ ಅಕ್ಷರಗಳ ಮೂಲಕ ಜನರ ಕಷ್ಟಗಳಿಗೆ ಸ್ಪಂದಿಸಲಾಗುತ್ತಿದೆ. ಹೀಗಾಗಿ ಈ ಕ್ಷೇತ್ರ ತೃಪ್ತಿ ತಂದಿದೆ ಎಂದರು.

ಆರ್‌ಎಸ್‌ಎಸ್ ದಕ್ಷಿಣ ಪ್ರಾಂತ ಸಹಕಾರ್ಯವಾಹ ಪಟ್ಟಾಭಿರಾಮ ಮಾತನಾಡಿ, ಹೊಸದಿಗಂತ ಪತ್ರಿಕೆ ಬೆಳೆಯುವುದರ ಜತೆಗೆ ಹೊಸದಿಗಂತ ಮುದ್ರಣ ಕ್ಷೇತ್ರವು ಬೆಳೆಯಬೇಕಿದೆ. ನ್ಯಾಯ ಹಾಗೂ ಧರ್ಮದ
ಮಾರ್ಗದಲ್ಲಿ ಇಲ್ಲಿ ವ್ಯವಹಾರ ನಡೆಸಲಾಗುತ್ತಿದೆ. ಮುಂದೆ ಬೇರೆ ಬೇರೆ ವಾಣಿಜ್ಯ ಮುದ್ರಣ ಕೆಲಸಗಳನ್ನು ಪಡೆದು ಸಂಸ್ಥೆಯನ್ನು ಇನ್ನಷ್ಟು ಲಾಭದಾಯಕವಾಗಿ ಮಾಡುವಂತೆ ಅವರು ಸಲಹೆ ನೀಡಿದರು.

ವೇದಿಕೆಯಲ್ಲಿ ಜ್ಞಾನ ಭಾರತಿ ಪ್ರಕಾಶನದ ಸಿಇಓ ಪ್ರಕಾಶ್ ಇದ್ದರು. ಮಾಜಿ ಎಂಎಲ್‌ಸಿ ಆರ್.ಕೆ. ಸಿದ್ದರಾಮಣ್ಣ,
ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ, ಪ್ರಮುಖರಾದ ನಟರಾಜ್ ಭಾಗವತ್, ಗಿರೀಶ್ ಕಾರಂತ್,
ನರೇಂದ್ರ ಮೊದಲಾದವರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!