ಸಾಮಾಗ್ರಿಗಳು
ಕ್ಯಾಪ್ಸಿಕಂ
ಈರುಳ್ಳಿ
ಕೊಬ್ಬರಿ
ಒಣಮೆಣಸು
ಬೆಳ್ಳುಳ್ಳಿ
ಎಣ್ಣೆ
ಉಪ್ಪು
ಖಾರದಪುಡಿ
ಸಾಂಬಾರ್ ಪುಡಿ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಹಾಕಿ, ಅದು ಕಾದ ನಂತರ ಈರುಳ್ಳಿ ಹಾಕಿ ಬಾಡಿಸಿ
ನಂತರ ಇದಕ್ಕೆ ಕ್ಯಾಪ್ಸಿಕಂ ಹಾಗೂ ಉಪ್ಪು ಹಾಕಿ ಲಿಡ್ ಮುಚ್ಚಿ ಬೇಯಿಸಿ
ಸ್ವಲ್ಪ ಬೆಂದ ನಂತರ ಖಾರದಪುಡಿ, ಸಾಂಬಾರ್ ಪುಡಿ ಹಾಕಿ
ನಂತರ ಬೆಳ್ಳುಳ್ಳಿ, ಒಣಮೆಣಸು ಹಾಗೂ ಕಾಯಿ ಅಥವಾ ಕೊಬ್ಬರಿಯನ್ನು ಮಿಕ್ಸಿ ಮಾಡಿ ಇಟ್ಟುಕೊಳ್ಳಿ
ಇದನ್ನು ಕಡೆಯಲ್ಲಿ ಹಾಕಿ ಮಿಕ್ಸ್ ಮಾಡಿ ಆಫ್ ಮಾಡಿ
ಮೇಲೆ ಕೊತ್ತಂಬರಿ ಹಾಕಿದ್ರೆ ಪಲ್ಯ ರೆಡಿ