ಇಂದಿನಿಂದ ಹೊಸ ತೆರಿಗೆ ನಿಯಮ ಜಾರಿ, ಈ ಬಗ್ಗೆ ಕಂಪ್ಲೀಟ್‌ ಡೀಟೆಲ್ಸ್‌ ಇಲ್ಲಿದೆ..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಾರ್ಚ್ 31ರ ಮುಕ್ತಾಯದೊಂದಿಗೆ ಪ್ರಸಕ್ತ ಹಣಕಾಸು ವರ್ಷ ಕೂಡ ಮುಕ್ತಾಯವಾಗಿದ್ದು, ಇಂದಿನಿಂದ( ಏಪ್ರಿಲ್‌ 1) ಹೊಸ ಹಣಕಾಸು ವರ್ಷ ಪ್ರಾರಂಭವಾಗಿದೆ.

ಇಂದಿನಿಂದ ನೂತನ ವಿತ್ತೀಯ ವರ್ಷ ಆರಂಭವಾಗುತ್ತಿದ್ದು, ಹೊಸ ತೆರಿಗೆ ನಿಯಮಗಳೂ ಇಂದಿನಿಂದ ಜಾರಿಯಾಗುತ್ತಿದೆ. ಬಜೆಟ್‌ನಲ್ಲಿ ಮಾಡಲಾದ ಬಹುತೇಕ ಘೋಷಣೆಗಳು ಜಾರಿಗೆ ಬರುತ್ತವೆ.

ಈ ಬಗ್ಗೆ ಏನೇನು ತಿಳಿದುಕೊಳ್ಳಬೇಕು? ಇಲ್ಲಿದೆ ಮಾಹಿತಿ..

* ಏಪ್ರಿಲ್ 1, 2024 ರಿಂದ, ಸರ್ಕಾರವು ಹೊಸ ತೆರಿಗೆ ವ್ಯವಸ್ಥೆಯನ್ನು ಡೀಫಾಲ್ಟ್ ಸೆಟ್ಟಿಂಗ್ ಆಗಿ ಜಾರಿಗೊಳಿಸುತ್ತದೆ. ಇದರರ್ಥ ತೆರಿಗೆದಾರರು ಹಳೆಯ ತೆರಿಗೆ ರಚನೆಗೆ ಬದ್ಧರಾಗಿರದಿದ್ದರೆ, ತೆರಿಗೆಗಳನ್ನು ಸ್ವಯಂಚಾಲಿತವಾಗಿ ಹೊಸ ವ್ಯವಸ್ಥೆಗೆ ಅನುಗುಣವಾಗಿ ಮೌಲ್ಯಮಾಪನ ಮಾಡಲಾಗುತ್ತದೆ.

* ಈ ಹಿಂದೆ ಹಳೆಯ ತೆರಿಗೆ ಪದ್ಧತಿಯಲ್ಲಿ 50 ಸಾವಿರ ರೂ.ಗಳ ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ವಯವಾಗುತ್ತಿತ್ತು. ಈಗ ಅದನ್ನು ಹೊಸ ತೆರಿಗೆ ಪದ್ಧತಿಯಲ್ಲಿ ಸೇರಿಸಲಾಗಿದೆ. ಸ್ಟ್ಯಾಂಡರ್ಡ್ ಡಿಡಕ್ಷನ್ ಅಡಿಯಲ್ಲಿ, 50 ಸಾವಿರಕ್ಕೆ ತೆರಿಗೆ ವಿನಾಯಿತಿ ಲಭ್ಯವಿದೆ. ಇದು ನಿಮ್ಮ ತೆರಿಗೆಯ ಆದಾಯವನ್ನು ಕಡಿಮೆ ಮಾಡುತ್ತದೆ.

* ಐದು ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವವರು ಸೆಕ್ಷನ್ 87A ಅಡಿಯಲ್ಲಿ 12,500 ರೂ.ವರೆಗೆ ವಿನಾಯಿತಿ ಪಡೆಯುತ್ತಾರೆ. ಹೊಸ ತೆರಿಗೆ ಪದ್ಧತಿಯ ಅಡಿಯಲ್ಲಿ, ತೆರಿಗೆದಾರರು ಇನ್ನು ಮುಂದೆ ಪ್ರಯಾಣದ ಟಿಕೆಟ್‌ಗಳು ಮತ್ತು ಬಾಡಿಗೆ ರಸೀದಿಗಳ ದಾಖಲೆಯನ್ನು ನಿರ್ವಹಿಸುವ ಅಗತ್ಯವಿಲ್ಲ.

* ನೂತನ ತೆರಿಗೆ ಪದ್ಧತಿ ಅನ್ವಯ ವಾರ್ಷಿಕ 3 ಲಕ್ಷ ರೂ ವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಇರುವುದಿಲ್ಲ.. 3 ರಿಂದ 6 ಲಕ್ಷ ರೂ ವರೆಗಿನ ಆದಾಯಕ್ಕೆ ಶೇ.5ರಷ್ಟು, 6 ರಿಂದ 9 ಲಕ್ಷದ ವರೆಗಿನ ಆದಾಯಕ್ಕೆ ಶೇ.10ರಷ್ಚು ತೆರಿಗೆ ಅನ್ವಯವಾಗುತ್ತದೆ. ಅಂತೆಯೇ 9ರಿಂದ 12 ಲಕ್ಷ ರೂ ವರೆಗಿನ ಆದಾಯಕ್ಕೆ ಶೇ.15ರಷ್ಟು ಮತ್ತು 12 ರಿಂದ 15 ಲಕ್ಷ ರೂ ವರೆಗಿನ ಆದಾಯಕ್ಕೆ ಶೇ.20ರಷ್ಟು ತೆರಿಗೆ ಅನ್ವಯವಾಗುತ್ತದೆ. 15 ಲಕ್ಷರೂ ಮೇಲ್ಪಟ್ಟ ಆದಾಯಕ್ಕೆ ಶೇ.30ರಷ್ಟು ತೆರಿಗೆ ಅನ್ವಯವಾಗಲಿದೆ.

* ನೀವು ಖಾಸಗಿ ವಲಯದಲ್ಲಿ ಕೆಲಸ ಮಾಡುತ್ತಿದ್ದರೆ ಮತ್ತು ಕಡಿಮೆ ರಜೆ ತೆಗೆದುಕೊಂಡರೆ, ರಜೆಯ ಬದಲಾಗಿ ನೀವು ಪಡೆಯುವ ಹಣದ ಮೇಲೆ ಹೆಚ್ಚಿನ ತೆರಿಗೆ ವಿನಾಯಿತಿಯನ್ನು ಪಡೆಯುತ್ತೀರಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here