ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಟಲೈಟ್ ಆಧಾರಿತ ಜಿಎನ್ಎಸ್ಎಸ್ ಟೋಲ್ ಸಿಸ್ಟಮ್ ಮೇ 1 ರಿಂದ ಆರಂಭಗೊಳ್ಳುತ್ತಿದೆ ಎಂದು ಕೇಂದ್ರ ಹೆದ್ದಾರಿ ಹಾಗೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಹೊಸ ಟೋಲ್ ವ್ಯವಸ್ಥೆ ಅಂದರೆ ಗ್ಲೋಬಲ್ ನ್ಯಾವಿಗೇಶನ್ ಸ್ಯಾಟಲೈಟ್ ಸಿಸ್ಟಮ್(GNSS ) ಹೆಚ್ಚು ಪಾರದರ್ಶಕತೆಯಿಂದ ಕೂಡಿದೆ. ಈ ವ್ಯವಸ್ಥೆಯಲ್ಲಿ ವಾಹನ ಟೋಲ್ ರಸ್ತೆಗೆ ಎಂಟ್ರಿ ಹಾಗೂ ಎಕ್ಸಿಟ್ ಆಧರಿಸಿ ಟೋಲ್ ಶುಲ್ಕ ವಿಧಿಸಲಿದೆ. ಇದು ರಾಷ್ಟ್ರೀಯ ಹೆದ್ದಾರಿ ಹಾಗೂ ಎಕ್ಸ್‌ಪ್ರೆಸ್‌ವೇಗಳಲ್ಲಿ ಮಾತ್ರ ಈ ಸೌಲಭ್ಯ ಲಭ್ಯವಾಗಲಿದೆ ಎಂದು ಹೇಳಿದ್ದಾರೆ.
GNSS ಟೋಲ್ ವ್ಯವಸ್ಥೆ ಅಡಿಯಲ್ಲಿ ಪ್ರತಿ ದಿನ ಟೋಲ್ ರಸ್ತೆಯಲ್ಲಿ 20 ಕಿಲೋಮೀಟರ್ ಉಚಿತ ಪ್ರಯಾಣ ಸಿಗಲಿದೆ. ಅಂದರೆ 20 ಕಿಲೋಮೀಟರ್ ಬಳಿಕ ಶುಲ್ಕ ಅನ್ವಯವಾಗುತ್ತದೆ. ಆರಂಭಿಕ 20 ಕಿಲೋಮೀಟರ್ ಉಚಿತವಾಗರಲಿದೆ ಎಂದು ಗಡ್ಕರಿ ಹೇಳಿದ್ದಾರೆ.
ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಈಗಾಗಲೇ ಕೆಲ ರಸ್ತೆಗಳಲ್ಲಿ ಪ್ರಾಯೋಗಿಕವಾಗಿ ಈ GNSS ಟೋಲ್ ಸಿಸ್ಟಮ್ ಜಾರಿ ಮಾಡಲಾಗಿದೆ. ಇದೀಗ ಮೇ.1 ರಿಂದ ದೇಶಾದ್ಯಂತ ಈ ವ್ಯವಸ್ಥೆ ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ.