New Trend | ಹೀಗಂತೂ ಎಲ್ಲಾ ಕಡೆ ಇದರದ್ದೇ ಮ್ಯಾಜಿಕ್.. ಅಷ್ಟಕ್ಕೂ ಏನಿದು ನಯಾ ಟ್ರೆಂಡ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಮಾಜಿಕ ಜಾಲತಾಣಗಳಲ್ಲಿ ಈಗ ಕಾರ್ಟೂನ್‌ ಅಥವಾ ಆನಿಮೇಟೆಟ್‌ ಸಿನಿಮಾ ಪಾತ್ರಗಳಂತೆ ಇರುವ ಚಿತ್ರಗಳು ಟ್ರೆಂಡ್‌ ಸೃಷ್ಟಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಕಾರ್ಟೂನ್‌ಗಳಿಗೆ ಭಾರೀ ಜನಪ್ರಿಯತೆ ಬಂದಿದೆ. ಅಷ್ಟಕ್ಕೂ ಯಾವುದು ಆ ಟ್ರೆಂಡ್ ಗೊತ್ತಿದ್ಯಾ?

“ಸ್ಟುಡಿಯೋ ಘಿಬ್ಲಿ” ಎಂಬುದು ಜಪಾನ್ ದೇಶದ ಒಂದು ಪ್ರಸಿದ್ಧ ಅನಿಮೇಷನ್ ಸ್ಟುಡಿಯೋ. ಇದನ್ನು ಹಯಾವೊ ಮಿಯಾಝಾಕಿ ಎಂಬುವವರು 1985ರಲ್ಲಿ ಸ್ಥಾಪಿಸಿದರು. ಇದು ತನ್ನ ವಿಶಿಷ್ಟವಾದ, ಕೈಯಿಂದ ಚಿತ್ರಿಸಿದ ಅನಿಮೇಷನ್ ಶೈಲಿ, ಭಾವನಾತ್ಮಕವಾಗಿ ಆಳವಾದ ಕಥೆಗಳು, ಮತ್ತು ಸುಂದರವಾದ ದೃಶ್ಯಗಳಿಗೆ ಹೆಸರುವಾಸಿಯಾಗಿದೆ.

ಇತ್ತೀಚೆಗೆ, ಈ ಸ್ಟುಡಿಯೋದ ಶೈಲಿಯಲ್ಲಿ AI ತಂತ್ರಜ್ಞಾನವನ್ನು ಬಳಸಿ ಫೋಟೋಗಳನ್ನು ಅನಿಮೇಟ್ ಮಾಡುವ ಟ್ರೆಂಡ್ ಬಹಳ ಜನಪ್ರಿಯವಾಗಿದೆ. ಈ ತಂತ್ರಜ್ಞಾನ ಬಳಸಿ, ಸಾಮಾನ್ಯ ಫೋಟೋಗಳನ್ನು ಸ್ಟುಡಿಯೋ ಘಿಬ್ಲಿ ಸಿನಿಮಾಗಳಲ್ಲಿರುವ ರೀತಿಯಲ್ಲಿ ಕಾರ್ಟೂನ್ ಚಿತ್ರಗಳಂತೆ ಪರಿವರ್ತಿಸಬಹುದು.

ಈ ಸ್ಟುಡಿಯೋವು “ಮೈ ನೆಬರ್ ಟೊಟೊರೊ”, “ಸ್ಪಿರಿಟೆಡ್ ಅವೇ”, “ಪ್ರಿನ್ಸೆಸ್ ಮೊನೊನೊಕೆ” ಮುಂತಾದ ಜನಪ್ರಿಯ ಅನಿಮೇಷನ್ ಚಿತ್ರಗಳನ್ನು ನೀಡಿದೆ.

OpenAI ಮಾತ್ರವಲ್ಲದೇ ಘಿಬ್ಲಿ ಚಿತ್ರಗಳನ್ನು ಎಕ್ಸ್‌ನ ಗ್ರಾಕ್‌, ಗೂಗಲ್‌ ಜೆಮಿನಿ ಸೇರಿದಂತೆ ಇತರೇ ಪ್ಲಾಟ್‌ಫಾರ್ಮ್‌ಗಳಲ್ಲೂ ರಚಿಸಬಹುದು.

ಸ್ನೇಹಿತರು, ಕುಟುಂಬದವರ ಫೋಟೋಗಳನ್ನು ಅಪ್ಲೋಡ್‌ ಮಾಡಿ ಎಐನಿಂದ ಸೃಷ್ಟಿಸಿದ ಘಿಬ್ಲಿ ಚಿತ್ರಗಳನ್ನು ಪೋಸ್ಟ್ ಮಾಡ್ತಿದ್ದಾರೆ. ದೊಡ್ಡ ದೊಡ್ಡ ಬ್ರ್ಯಾಂಡ್‌ಗಳು ತಮ್ಮ ಜಾಹೀರಾತುಗಳಿಗೆ ಘಿಬ್ಲಿ ಚಿತ್ರಗಳನ್ನು ಬಳಸಿಕೊಂಡು ಪ್ರಚಾರ ಮಾಡಲು ಆರಂಭಿಸಿವೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!