ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದಲ್ಲಿನ ಹನುಮ ಧ್ವಜ ತೆರವುಗೊಳಿಸಿದ್ದ ವಿಚಾರ ರಾಜ್ಯದಲ್ಲಿ ಸಾಕಷ್ಟು ಸದ್ದು ಮಾಡಿದ್ದು, ರಾಜಕೀಯ ತಿರುವು ಪಡೆದಿತ್ತು. ಇದೀಗ ಇದೇ ಸ್ಥಳದಲ್ಲಿ ಹಳೆಯ ತ್ರಿವರ್ಣ ಧ್ವಜ ತೆಗೆದು ಹೊಸ ಧ್ವಜವನ್ನು ಹಾರಿಸಲಾಗಿದೆ.
ಗ್ರಾಮದಲ್ಲಿನ 108 ಅಡಿಯ ಅರ್ಜುನ ಸ್ತಂಭದಲ್ಲಿದ್ದ ಹನುಮ ಧ್ವಜವನ್ನು ತೆರವುಗೊಳಿಸಿ ಸರ್ಕಾರ ತ್ರಿವರ್ಣ ಧ್ವಜ ಹಾರಿಸಿದೆ. ಹನುಮ ಧ್ವಜ ತೆರವುಗೊಳಿಸಿದ್ದಕ್ಕೆ ಗ್ರಾಮಸ್ಥರು, ಹಿಂದೂ ಸಂಘಟನೆಗಳು ಮತ್ತು ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಇದೀಗ, ಕೆರಗೋಡು ಅರ್ಜುನ ಸ್ತಂಭದಲ್ಲಿದ್ದ ಹಳೆ ತ್ರಿವರ್ಣ ಧ್ವಜ ತೆಗೆದು ಹೊಸ ಧ್ವಜ ಹಾರಿಸಲಾಗಿದೆ.
ಜಿಲ್ಲಾಡಳಿತ ಇಂದು ಬೆಳಗ್ಗೆ ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ಹಳೆ ಧ್ವಜ ಇಳಿಸಿ ಹೊಸ ಬಾವುಟವನ್ನು ಹಾರಿಸಿದೆ. ಮುಂಜಾನೆ ಕೆರಗೋಡು ಗ್ರಾಮಕ್ಕೆ ಬಂದ ಪೊಲೀಸರು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತೆ ಕೈಗೊಂಡರು. ಬಳಿಕ 6:45ರ ವೇಳೆಯಲ್ಲಿ ಹಳೆದ ರಾಷ್ಟ್ರ ಧ್ವಜ ಇಳಿಸಿ ಎಡಿಸಿ ನಾಗರಾಜ್ ಅವರು ಹೊಸ ಧ್ವಜಾರೋಹಣ ಮಾಡಿದರು. ಮುಂದಿನ ದಿನಗಳಲ್ಲಿ ಬೃಹತ್ ಗಾತ್ರದ ಧ್ವಜಾರೋಹಣ ಮಾಡುವುದಾಗಿ ಹೇಳಿದ್ದಾರೆ.
ಇದೇರೀತಿ ಮಸ್ಲೀಮರ ಧ್ವಜ ಒಂದನ್ನು ಇಳಿಸಿ, ಅಲ್ಲಿ ರಾಷ್ಟ್ರ ಧ್ವಜ ಹಾರಿಸಿ ನಿಮ್ಮ ಮತೇತರತ್ವವನ್ನು ತೋರಿಸಿಕೊಡಿ..