ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಪಾಣಿಹಟಿ ಕ್ಷೇತ್ರದ ಫಲಿತಾಂಶ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಬಿಜೆಪಿ ಅಭ್ಯರ್ಥಿ ರತ್ನಾ ದೇಬನಾಥ್ ಗಮನಾರ್ಹ ಜಯ ಸಾಧಿಸಿದ್ದಾರೆ.
ಸಾಮಾಜಿಕ ನ್ಯಾಯ ಮತ್ತು ಮಹಿಳಾ ಸುರಕ್ಷತೆ ವಿಚಾರಗಳನ್ನು ಮುಂದಿಟ್ಟುಕೊಂಡು ಕಣಕ್ಕಿಳಿದಿದ್ದ ಅವರು, ಈ ಗೆಲುವಿನ ಮೂಲಕ ರಾಜ್ಯ ರಾಜಕೀಯದಲ್ಲಿ ಹೊಸ ಸಂದೇಶ ರವಾನಿಸಿದ್ದಾರೆ.
ಉತ್ತರ 24 ಪರಗಣ ಜಿಲ್ಲೆಯ ಪಾಣಿಹಟಿ ಕ್ಷೇತ್ರದಲ್ಲಿ ಈ ಬಾರಿ ತೀವ್ರ ಪೈಪೋಟಿ ಕಂಡುಬಂದಿತ್ತು. ಟಿಎಂಸಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ತೀರ್ಥಂಕರ ಘೋಷ್ ವಿರುದ್ಧ ರತ್ನಾ ದೇಬನಾಥ್ ಮುನ್ನಡೆ ಸಾಧಿಸಿ ಅಂತಿಮವಾಗಿ ವಿಜಯಶಾಲಿಯಾಗಿದ್ದಾರೆ. ಈ ಕ್ಷೇತ್ರದ ಫಲಿತಾಂಶವನ್ನು ರಾಜಕೀಯ ವಲಯಗಳು ವಿಶೇಷವಾಗಿ ಗಮನಿಸಿದ್ದವು.
ಇದನ್ನೂ ಓದಿ:
ಚುನಾವಣಾ ಪ್ರಚಾರದ ವೇಳೆ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳು, ಆಡಳಿತ ವೈಫಲ್ಯ ಮತ್ತು ಕಾನೂನು ಸುವ್ಯವಸ್ಥೆ ಪ್ರಶ್ನೆಗಳು ಪ್ರಮುಖ ವಿಚಾರಗಳಾಗಿ ಹೊರಹೊಮ್ಮಿದ್ದವು. ಇದೇ ವಿಚಾರಗಳನ್ನು ಆಧಾರವಾಗಿಸಿಕೊಂಡು ಬಿಜೆಪಿ ತೀಕ್ಷ್ಣ ಪ್ರಚಾರ ನಡೆಸಿತ್ತು.
ಇದೇ ವೇಳೆ, ರಾಜ್ಯದ ಒಟ್ಟು ಫಲಿತಾಂಶದಲ್ಲೂ ಬಿಜೆಪಿ ಸ್ಪಷ್ಟ ಮುನ್ನಡೆ ಸಾಧಿಸಿದ್ದು, ಹಲವು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದಾರೆ. ಬಂಗಾಳದ ರಾಜಕೀಯ ಚಿತ್ರಣದಲ್ಲೀಗ ಮಹತ್ವದ ಬದಲಾವಣೆಯ ಸೂಚನೆಗಳು ಕಾಣಿಸುತ್ತಿವೆ.



