ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದ ಲೋಹಗಢ ಕೋಟೆಯಲ್ಲಿ ಉದ್ಯಮಿ ಕೇತನ್ ಅಗರ್ವಾಲ್ ಮರ್ಡರ್ ಕೇಸ್‌ಗೆ ಹೊಸ ತಿರುವು ಸಿಕ್ಕಿದೆ.
ಈವರೆಗೂ ಮದುವೆಗೆ ವಿರೋಧವೇ ಇಲ್ಲದಂತೆ ಸಿಯಾ ನಾಟಕವಾಡಿ ಕಡೆಗೆ ಕೊಲೆ ಮಾಡಿದ್ದರು ಎಂದು ಹೇಳಲಾಗಿತ್ತು. ಆದರೆ ಇದೀಗ ಸಿಯಾ ನನಗೆ ಮದುವೆ ಇಷ್ಟವಿರಲಿಲ್ಲ. ಅದು ಕೇತನ್‌ಗೂ ಗೊತ್ತಿತ್ತು. ಇಷ್ಟವಿಲ್ಲ, ಪ್ರೀತಿಸುತ್ತಿಲ್ಲ ಎಂದು ಹೇಳಿದರೂ ಆತ ನಿಶ್ಚಿತಾರ್ಥ ಮುರಿಯಲು ಒಪ್ಪಲಿಲ್ಲ ಎಂದು ಸಿಯಾ ಹೇಳಿಕೊಂಡಿದ್ದಾರೆ.
ಆದರೆ ಇತ್ತ ಸಿಯಾ ಬಾಯ್‌ಫ್ರೆಂಡ್ ಚೇತನ್ ಚೌಧರಿ ಕೊಲೆ ಮಾಡುವುದು ನನ್ನ ಉದ್ದೇಶ ಆಗಿರಲಿಲ್ಲ. ಸಿಯಾ ನನ್ನ ಮೇಲೆ ಒತ್ತಡ ಹೇರಿದ್ದರು ಎಂದು ಹೇಳಿದ್ದಾರೆ. ಇಬ್ಬರನ್ನೂ ಪ್ರತ್ಯೇಕ ವಿಚಾರಣೆ ಮಾಡುತ್ತಿದ್ದ ಇಬ್ಬರ ಹೇಳಿಕೆಗಳೂ ವಿಭಿನ್ನವಾಗಿವೆ.
ಪುಣೆ ಗ್ರಾಮಾಂತರ ಪೊಲೀಸರ ಪ್ರಕಾರ, ಇದೂವರೆಗಿನ ತನಿಖೆಯಲ್ಲಿ ಕೊಲೆಯ ಸಂಪೂರ್ಣ ಸಂಚನ್ನು ರೂಪಿಸಿದ್ದು ಸಿಯಾ ಗೋಯಲ್ ಎಂಬುದು ಪ್ರಾಥಮಿಕವಾಗಿ ಬೆಳಕಿಗೆ ಬಂದಿದೆ. ಮದುವೆಯನ್ನು ರದ್ದುಗೊಳಿಸಲು ಕೇತನ್ ಒಪ್ಪದಿದ್ದಾಗ, ಅವರನ್ನು ಕೊಲೆ ಮಾಡುವ ಯೋಜನೆಯನ್ನು ಚೇತನ್ ರೂಪಿಸಿದ್ದಾನೆ ಎಂದು ಸಿಯಾ ಹೇಳಿದ್ದರೆ, ಕೊಲೆ ಮಾಡಲು ನನ್ನನ್ನು ಒತ್ತಾಯಿಸಿದ್ದು ಸಿಯಾ ಎಂದು ಚೇತನ್ ಪ್ರತಿಕ್ರಿಯಿಸಿದ್ದಾನೆ.



