‘ಹೊಸದುರ್ಗ’ಕ್ಕೆ ಹೊಸ ಕಳೆ: ಕೈದಿಗಳ ಕೈಯಲ್ಲಿ ನೀರುಣ್ಣಲು ಬರುತ್ತಿವೆ ಬಗೆಬಗೆಯ ಪ್ರಾಣಿ ಪಕ್ಷಿಗಳು!

ಹೊಸದಿಗಂತ, ಮಂಗಳೂರು:

ಜೈಲಿನಲ್ಲಿರುವ ಕೈದಿಗಳು ಎಂದರೆ ಮಾನವೀಯತೆ ಮರೆತವರು ಎಂದುಕೊಳ್ಳುವವರಿಗೆ ತಮ್ಮಲ್ಲೂ ಹೃದಯವಿದೆ, ಭಾವನೆಗಳಿವೆ ಎಂಬುದನ್ನು ತೋರಿಸಿಕೊಡುತ್ತಿದ್ದಾರೆ ಕಾಸರಗೋಡು ಜಿಲ್ಲೆಯ ಹೊಸದುರ್ಗ ಜೈಲಿನ ಕೈದಿಗಳು!

ಬಿಸಿಲ ಬೇಗೆಗೆ ಬಳಲಿ ಬರುವ ಪ್ರಾಣಿ ಪಕ್ಷಿಗಳಿಗೆ ನೀರುಣಿಸುವ ಪುಣ್ಯ ಕಾರ್ಯ ಇಲ್ಲಿ ಕೈದಿಗಳ ನೇತೃತ್ವದಲ್ಲಿ ನಡೆಯುತ್ತಿದೆ. ತಮ್ಮ ಶಿಕ್ಷೆಯ ಕೆಲಸದ ಭಾಗವಾಗಿ ಕೈದಿಗಳು ಇದನ್ನು ಆರಿಸಿಕೊಂಡಿದ್ದು, ನೀರನ್ನು ತರಿಸಿ ಇಲ್ಲಿ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗುತ್ತಿದೆ. ಇದಕ್ಕೆ ಅಧಿಕಾರಿಗಳ ಪ್ರೋತ್ಸಾಹವೂ ಸಿಗುತ್ತಿದೆ.

ಇಲ್ಲೀಗ ನಿತ್ಯವೂ ಪ್ರಾಣಿ ಪಕ್ಷಿಗಳು ಬಂದು ತಮ್ಮ ದಾಹ ತೀರಿಸಿಕೊಳ್ಳುತ್ತಿವೆ. ಒಟ್ಟಿನಲ್ಲಿ ಈ ಕಾರಾಗೃಹದಕ್ಕೆ ಹೊಸ ಕಳೆ ಬಂದಿದ್ದು, ಪ್ರಾಣಿ ಪಕ್ಷಿಗಳ ಕಲರವ ಮುದ ನೀಡುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!