ರಾಜ್ಯಾದ್ಯಂತ ಹೊಸತೊಡಕು ಸಂಭ್ರಮ; ಮಾಂಸದ ಅಂಗಡಿಗಳಲ್ಲಿ ಭಾರೀ ಕ್ಯೂ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಯುಗಾದಿ ಹಬ್ಬದ ಮರುದಿನ ರಾಜ್ಯದಲ್ಲಿ ಹೊಸತೊಡಕು ಆಚರಣೆ ಮಾಡಲಾಗುತ್ತದೆ. ನೆಂಟರ, ಸ್ನೇಹಿತರೆಲ್ಲ ಕೂಡಿ ವಿಭಿನ್ನ ರೀತಿಯ ಮಾಂಸಾಹಾರ ಖಾದ್ಯಗಳನ್ನು ತಯಾರಿಸಿ ತಿನ್ನುವ ಹಬ್ಬ ಇದಾಗಿದೆ. ಇಂದು ಸೋಮವಾರವಾದ ಕಾರಣ ಹಲವರು ಹೊಸತೊಡಕು ಆಚರಣೆ ಮಾಡುತ್ತಿಲ್ಲ. ನಾಳೆ ನಾನ್‌ವೆಜ್‌ ಅಂಗಡಿಗಳಲ್ಲಿ ರಶ್‌ ಇರೋದಂತೂ ಗ್ಯಾರಂಟಿ ಎನ್ನಲಾಗಿದೆ.

ಇಂದು ಎಲ್ಲೆಡೆ ಚಿಕನ್, ಮಟನ್, ಫಿಶ್ ಅಂಗಡಿಗಳಲ್ಲಿ ಜನ ತುಂಬಿರುತ್ತಾರೆ. ಕೆಜಿ ಕೆಜಿಗಟ್ಟಲೇ ಖರೀದಿಸಿ, ಮಾಂಸಾಹಾರವೇ ಪ್ರಧಾನವಾದ ಅಡುಗೆಯನ್ನು ಮಾಡುತ್ತಾರೆ. ಕುಟುಂಬಸ್ಥರೆಲ್ಲ ಸೇರಿ ಹಬ್ಬದೂಟ ಮಾಡುತ್ತಾರೆ. ಕೆಲವರು ನೆಂಟರಿಷ್ಟರನ್ನೂ ಆಹ್ವಾನಿಸಿ, ಖಾರದೂಟದ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಹೊಸ ತೊಡಕಿನ ದಿನ ಚಿಕನ್, ಮಟನ್ ಬೆಲೆ ಹೆಚ್ಚಿರುತ್ತದೆ. ಹೊರ ರಾಜ್ಯಗಳಿಂದಲೂ ವಿಶೇಷ ತಳಿಯ ಕುರಿ, ಮೇಕೆಗಳನ್ನು ತರಿಸಿ ಮಾರುವುದುಂಟು. ಹಿಂದೆಯೆಲ್ಲ ಕೆಜಿ ಲೆಕ್ಕ ಇರಲಿಲ್ಲ. ಗುಡ್ಡೆ ಲೆಕ್ಕದಲ್ಲಿ ಮಾರಾಟವಾಗುತ್ತಿತ್ತು. ಈಗಲೂ ಆ ಪರಿಪಾಠ ಇದೆ.

ಸ್ನೇಹಿತರು, ನೆಂಟರು ಸೇರಿ ಮನೆಯ ಬಳಿ ಆಟಗಳನ್ನು ಆಡುವುದು, ನಂತರ ಒಂದೊಳ್ಳೆ ಊಟ ಮಾಡಲಾಗುತ್ತದೆ. ಈ ಪದ್ಧತಿ ಹಿಂದಿನಿಂದಲೂ ಇದೆ. ಒಂದು ದಿನ ರಿಲ್ಯಾಕ್ಸ್‌ ಮಾಡೋದಕ್ಕೆ ಮೀಸಲಿಡಲಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!