ಹೊಸದಿಗಂತ ವರದಿ, ಭಟ್ಕಳ :
ಹೊಸ ವರ್ಷದ ಆಚರಣೆ ಹಿನ್ನೆಲೆಯಲ್ಲಿ ಪ್ರವಾಸಿ ಕ್ಷೇತ್ರ ಮತ್ತು ಪ್ರಮುಖ ಸ್ಥಳಗಳಲ್ಲಿ ಮುಂಜಾಗ್ರತಾಕ್ರಮವಾಗಿ ಕಾರವಾರದ ಬಾಂಬ್ ನಿಷ್ಕ್ರೀಯ ದಳದವರು ಶ್ವಾನದೊಂದಿಗೆ ಆಗಮಿಸಿ ಮುರುಡೇಶ್ವರ ದೇವಸ್ಥಾನ ಸೇರಿದಂತೆ ವಿವಿಧ ಕಡೆ ತಪಾಸಣೆ ನಡೆಸಿದರು.
ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಭಟ್ಕಳ ಹಾಗೂ ಅಳ್ವೇಕೋಡಿ ಬಂದರು ಮತ್ತು ಮಾರುಕಟ್ಟೆಯಲ್ಲಿ ತಪಾಷಣಾ ನಡೆಸಿದ ಬಾಂಬ್ ನಿಷ್ಕ್ರೀಯ ದಳದವರು ಮುರ್ಡೇಶ್ವರ ದೇವಸ್ಥಾನ, ಶಿವನ ಗೋಪುರ, ಕಡಲಯೀರ ಸೇರಿದಂತೆ ಪ್ರಮುಖ ಜನಜಂಗುಳಿ ಇರುವ ಪ್ರದೇಶಗಳಲ್ಲಿ ತಪಾಷಣೆ ನಡೆಸಿತು.