ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊಸ ವರ್ಷವನ್ನು ಕೇವಲ ಭಾರತ ದೇಶದಲ್ಲಷ್ಟೇ ಅಲ್ಲ, ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ನ್ಯೂಯಾರ್ಕ್ನ ಆಕ್ಲೆಂಡ್ನಲ್ಲಿ ನೂತನ ವರ್ಷವನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲಾಗಿದೆ.
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ 2025ನ್ನು ಆಕ್ಲೆಂಡ್ ಜನರು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಆಕ್ಲೆಂಡ್ನ ಸ್ಕೈ ಟವರ್ನಿಂದ ಬೆಳಕಿನ ಬಾಣ ಬಿರುಸುಗಳು ಸಿಡಿದಿವೆ.
ಕೌಂಟ್ಡೌನ್ ಮುಗಿಯುತ್ತಿದ್ದಂತೆ ಆಗಸದಲ್ಲಿ ಬೆಳಕಿನ ಚಿತ್ತಾರವೇ ಮೂಡಿತ್ತು. ಸಿಡಿಮದ್ದು ಸಿಡಿಯುತ್ತಿದ್ದಂತೆ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.