ನ್ಯೂಯಾರ್ಕ್‌ ಜನರನ್ನು ಚಿಂತೆಗೀಡು ಮಾಡುತ್ತಿವೆ ಮೂಷಿಕಗಳು !

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನ್ಯೂಯಾರ್ಕ್‌ ಶಹರದಲ್ಲೀಗ ಇಲಿಗಳಿಂದಾಗಿ ಜನರು ತಲೆಕೆಡಿಸಿಕೊಳ್ಳುವಂತಾಗಿದೆ. ಇಲಿಗಳು ಕೋವಿಡ್‌ ರೂಪಾಂತರಿಯ ಹರಡುವಿಕೆಗೆ ಕಾರಣವಾಗುವ ಸಾಧ್ಯತೆ ಹೆಚ್ಚಿದೆ ಎಂದು ಅಧ್ಯಯನ ವರದಿಯೊಂದು ಬಹಿರಂಗಪಡಿಸಿದ್ದು ಇದು ಜನರ ನಿದ್ದೆಗೆಡಿಸಿದೆ. ಮುಕ್ತ ಜರ್ನಲ್‌ mBio ನಲ್ಲಿ ಬಿಡುಗಡೆಯಾಗಿರುವ ಅಮೇರಿಕನ್ ಫಾರ್ ಮೈಕ್ರೋಬಯಾಲಜಿ ಅಧ್ಯಯನ ವರದಿಯೊಂದು ನ್ಯೂಯಾರ್ಕ್ ಇಲಿಗಳು ಮೂರು ಕೋವಿಡ್ ರೂಪಾಂತರಿಗಳನ್ನು ಹೊಂದಿದ್ದು ಅವು ಜನರಿಗೆ ವರ್ಗಾವಣೆಯಾಗ ಬಹುದಾದ ಸಾಧ್ಯತೆಯಿದೆ ಎಂದು ಅಧ್ಯಯನ ವರದಿಯು ಹೇಳಿದೆ.

ಲಭ್ಯವಿರೋ ಮಾಹಿತಿಯ ಪ್ರಕಾರ ನ್ಯೂಯಾರ್ಕ್‌ ನಗರದಲ್ಲಿ 8 ಮಿಲಿಯನ್‌ ಗಳಷ್ಟು ಇಲಿಗಳಿವೆ. ಇವುಗಳಿಂದ ಮನುಷ್ಯರಿಗೆ ಕೋವಿಡ್‌ ರೂಪಾಂತರಿ ವರ್ಗಾವಣೆಯಾಗು ಭೀತಿ ಈಗ ನ್ಯೂಯಾರ್ಕ್‌ ಜನರಿಗೆ ಕಾಡುತ್ತಿದೆ. ಅಧ್ಯಯನ ವರದಿಯ ಪ್ರಕಾರ ಸೋಂಕಿತ ಇಲಿಗಳು ಮನುಷ್ಯರೊಂದಿಗೆ ಸಂಪರ್ಕ ಹೊಂದುವ ಸಾಧ್ಯತೆಗಳು ಹೆಚ್ಚಿದ್ದು ಇದು 1347-1351 ರ ಸಮಯದಲ್ಲಿ ದಂಶಕಗಳ ಮೂಲಕ ಯುರೋಪಿನಲ್ಲಿ ಕೋಲಾಹಲ ಸೃಷ್ಟಿಸಿದ್ದ ʼಬ್ಲ್ಯಾಕ್‌ ಡೆತ್‌ʼ ರೀತಿಯ ಘಟನೆಗೆ ಕಾರಣವಾಗಬಹುದು ಎಂದು ಎಚ್ಚರಿಸಲಾಗಿದೆ. ಆದರೆ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಕೋವಿಡ್ ಪ್ರಾಣಿಯಿಂದ ಮನುಷ್ಯನಿಗೆ ಹರಡುವುದು ಅಪರೂಪ ಎಂದು ಹೇಳಿದೆ.

ಅಧ್ಯಯನದ ಪ್ರಧಾನ ತನಿಖಾಧಿಕಾರಿ ಡಾ ಹೆನ್ರಿ ವಾನ್ “ಈ ಕುರಿತು ಹೆಚ್ಚಿನ ಸಂಶೋಧನೆ ಮತ್ತು ಪ್ರಯೋಗಗಳು ನಡೆಯಬೇಕು, ವೈರಸ್‌ ಮನುಷ್ಯರಿಗೆ ಹರಡುತ್ತವೆಯೇ ಇಲ್ಲವೇ ಎಂಬುದರ ಕುರಿತು ಇನ್ನೂ ಹೆಚ್ಚಿನ ತನಿಖೆಗಳು ನಡೆಯಬೇಕು” ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!