ಹೊಸದಿಗಂತ ಡಿಜಿಟಲ್ ಡೆಸ್ಕ್:
ನ್ಯೂಝಿಲೆಂಡ್ ತಂಡದ ಸ್ಟಾರ್ ವೇಗಿ ಆಟಗಾರ ಲಾಕಿ ಫರ್ಗುಸನ್ ಹೊಸ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರು ತಮ್ಮ ಬಹುಕಾಲದ ಗೆಳತಿ ಎಮ್ಮಾ ಕೊಮೊಕಿ ಜೊತೆಯಲಿ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಟ್ಟಿದ್ದಾರೆ.
ಲಾಕಿ ಫರ್ಗುಸನ್ ಮತ್ತು ಎಮ್ಮಾ ಕೊಮೊಕಿ ಫೆ. 2 ರಂದು ಮದುವೆಯಾದರು. ಆದರೆ, ಇದನ್ನು ಎಲ್ಲಿಯೂ ಘೋಷಿಸಿರಲಿಲ್ಲ. ಇದೀಗ ಲಾಕಿ ಫರ್ಗುಸನ್ ಅವರ ವಿವಾಹ ಸಮಾರಂಭದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.
ಲಾಕಿ ಫರ್ಗುಸನ್ ಅವರ ವಿವಾಹ ಸಮಾರಂಭದಲ್ಲಿ ಕುಟುಂಬ ಸದಸ್ಯರು ಮತ್ತು ಆಪ್ತರು ಮಾತ್ರ ಭಾಗವಹಿಸಿದ್ದರು.
ಈ ಮದುವೆಯಲ್ಲಿ, ಲಾಕಿ ಫರ್ಗುಸನ್ ಕ್ಲಾಸಿಕ್ ಕಪ್ಪು ಮತ್ತು ಬಿಳಿ ಸೂಟ್ ಧರಿಸಿದ್ದರು. ಆದರೆ ಎಮ್ಮಾ ಕೊಮೊಕಿ ವೈಟ್ ಗೌನ್ ನಲ್ಲಿ ಮಿಂಚಿದರು. ಇದೀಗ ಫರ್ಗುಸನ್ ಜೋಡಿಯ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಲಾಕಿ ಫರ್ಗುಸನ್ ಈ ಬಾರಿಯ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಲಿದ್ದಾರೆ. ಆರ್‌ಸಿಬಿ ನ್ಯೂಝಿಲೆಂಡ್ ವೇಗಿ ಲಾಕಿ ಫರ್ಗುಸನ್ ಅವರನ್ನು 200 ಕೋಟಿ ರೂ.ಗೆ ಖರೀದಿಸಿದೆ.