VIRAL VIDEO| ಸ್ಪೆಷಲ್‌ ಮದುವೆ: ಸ್ಕೈ ಡೈವಿಂಗ್ ಮಾಡುತ್ತಾ ವಿವಾಹವಾದ ಜೋಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರತಿಯೊಬ್ಬ ಯುವತಿ ಮತ್ತು ಯುವಕನ ಜೀವನದಲ್ಲಿ ಮದುವೆಯೆಂಬುದು ಮರೆಯಲಾಗದ ಸುಂದರ ಘಟನೆ. ಆ ದಿನವನ್ನು ತಮ್ಮ ಜೀವನದುದ್ದಕ್ಕೂ ನೆನಪಿಟ್ಟುಕೊಳ್ಳುವುದಕ್ಕಾಗಿ ವೆರೈಟಿಯಾಗಿ ಮದುವೆಯಾಗಲು ಇಚ್ಛಿಸುತ್ತಾರೆ. ವಿವಾಹ ಸಮಾರಂಭವನ್ನು ವೈವಿಧ್ಯಮಯವಾಗಿ ಆಚರಿಸಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಈ ಕ್ರಮದಲ್ಲಿ ಜೋಡಿಯೊಂದು ಸ್ಕೈ ಡೈವಿಂಗ್‌ ಮಾಡುತ್ತಾ ವಿವಾಹವಾದ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಪ್ರಿಸ್ಸಿಲ್ಲಾ ಆಂಟ್ ಮತ್ತು ಫಿಲಿಪ್ಪೊ ಲೆಕರ್ಸ್ ತಮ್ಮ ಮದುವೆಯನ್ನು ಬಹಳ ವಿಶಿಷ್ಟವಾಗಿ ಮಾಡಿಕೊಳ್ಳಲು ಯೋಜಿಸಿರು. ಅದರಂತೆಯೇ  ಎತ್ತರದ ಬೆಟ್ಟಗಳಿಂದ ಸ್ಕೈಡೈವಿಂಗ್ ಮಾಡುವ ಮೂಲಕ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಂತೆ ಮದುವೆಗೆ ಬಂದವರು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.

ವಿಡಿಯೋವನ್ನು ಲಾಲಿಬ್ರೆತಮೊರಡಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಸಕಾರಾತ್ಮಕ ಹಾಗೂ ನಕರಾತ್ಮಕ ಕಮೆಂಟ್‌ಗಳು ಬರುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!