ಹೊಸದಿಗಂತ ಡಿಜಿಟಲ್ ಡೆಸ್ಕ್ :
ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡೆರ್ನ್ ಅವರು ಮಂಗಳವಾರ ತಮ್ಮ ಕೊನೆಯ ಪ್ರಧಾನಿ ಭಾಷಣ ಮಾಡಿದರು. ಭಾಷಣದಲ್ಲಿ ಉತ್ತರಾಧಿಕಾರಿ ಕ್ರಿಸ್ ಹಿಪ್ಕಿನ್ಸ್ ಗೆ ಸಲಹೆ ನೀಡಿದ್ದಾರೆ.
ಲೇಬರ್ ಪಾರ್ಟಿ ನಾಯಕಿ 42 ವರ್ಷದ ಜಸಿಂಡ ಅವರು ತನ್ನ ನಿರ್ಗಮನವನ್ನು “ನ್ಯೂಜಿಲೆಂಡ್‌ಗೆ ನಕಾರಾತ್ಮಕ ವ್ಯಾಖ್ಯಾನ” ಎಂದು ನೋಡುವುದನ್ನು “ದ್ವೇಷಿಸುತ್ತೇನೆ” ಎಂದು ಹೇಳಿದರು.
“ಇಷ್ಟು ವರ್ಷಗಳ ಕಾಲ ಈ ಸ್ಥಾನವನ್ನು ಹೊಂದಿದ್ದಕ್ಕಾಗಿ ನಾನು ಕೃತಜ್ಞತೆಯನ್ನು ಸಲ್ಲಿಸುತ್ತೇನೆ” ಎಂದು ಸುದ್ದಿಗಾರರಿಗೆ ತಿಳಿಸಿದರು.
ಅರ್ಡೆರ್ನ್ ಅವರು ಈಗ ದೇಶೀಯ ರಾಜಕೀಯದಿಂದ ಹಿಂದೆ ಸರಿಯುವುದಾಗಿ ಹೇಳಿದರು ಮತ್ತು ಹಿಪ್ಕಿನ್ಸ್ಗೆ ಕೆಲವು ಸಲಹೆಗಳನ್ನು ನೀಡಿದರು.
ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿರುವ ಕ್ರಿಸ್ ಹಿಪ್ಕಿನ್ಸ್ ಗೆ “ಬಹುಶಃ ನಾನು ಅವನಿಗೆ ನೀಡಿದ ಪ್ರಮುಖ ಸಲಹೆಯೆಂದರೆ ‘ನೀನು ಮಾಡು ನಿನ್ನಿಂದಾಗತ್ತೆ’,” ಎಂದು ಜಸಿಂಡಾ ಅರ್ಡೆರ್ನ್ ಅವರು ಹೇಳಿದ್ದಾರೆ.
ಹಿಪ್ಕಿನ್ಸ್ ಬುಧವಾರ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ತಮ್ಮ 20 ವರ್ಷಗಳ ಸ್ನೇಹಿತ ಸ್ಥಾನವನ್ನು ಬದಲಿಸುವುದು “ಕಹಿ ಕ್ಷಣ ” ಎಂದು ಹಿಪ್ಕಿನ್ಸ್ ಹೇಳಿದ್ದಾರೆ.
ಈ ಸಂದರ್ಭದಲ್ಲಿ “ಈ ಪಾತ್ರವನ್ನು ನಿಭಾಯಿಸಲು ನನಗೆ ನಿಜವಾಗಿಯೂ ಗೌರವವಿದೆ, ಆದರೆ ಜಸಿಂದಾ ನನಗೆ ತುಂಬಾ ಒಳ್ಳೆಯ ಸ್ನೇಹಿತೆ” ಎಂದು ಹಿಪ್ಕಿನ್ಸ್ ಸುದ್ದಿಗಾರರಿಗೆ ತಿಳಿಸಿದರು.