ಹೊಸದಿಗಂತ ಡಿಜಿಟಲ್ ಡೆಸ್ಕ್:
ಭೌಗೋಳಿಕ ಅಧ್ಯಯನ ನಡೆಸುತ್ತಿರುವ ಹೈದರಾಬಾದ್ ಮೂಲದ ಎನ್‌ಜಿಆರ್‌ಐ ಮತ್ತೊಂದು ಮಹತ್ವದ ವಿಷಯದ ಕುರಿತು ಸಂಶೋಧನೆ ನಡೆಸುತ್ತಿದೆ. ಅದೆಷ್ಟೋ ಜೀವನದಿಗಳ ತಾಣವಾಗಿರುವ ಹಿಮಾಲಯ ಪರ್ವತಗಳ ತಳದಲ್ಲಿರುವ ಭೂಕಂಪನ ಕೇಂದ್ರಗಳು, ಖನಿಜಗಳು ಮತ್ತು ಬಿಸಿನೀರಿನ ಸರೋವರಗಳ ಅಧ್ಯಯನ ಕೈಗೊಂಡಿದೆ.
ಪರ್ವತ ಪ್ರದೇಶಗಳನ್ನು ಸಮೀಕ್ಷೆ ಮಾಡಲು ಅತ್ಯಾಧುನಿಕ ಡ್ರೋನ್‌ಗಳನ್ನು ಬಳಸಲಾಗಿದೆ. ಬೆಂಗಳೂರಿನ ನ್ಯಾಷನಲ್ ಏರೋಸ್ಪೇಸ್ ಲ್ಯಾಬೊರೇಟರಿ ಸಹಯೋಗದಲ್ಲಿ ಸಮೀಕ್ಷೆ ನಡೆಸಲಾಗಿದೆ. ಹಿಮಾಲಯದಲ್ಲಿ ಮಂಜುಗಡ್ಡೆಯ ಪ್ರದೇಶಗಳು ಬಿಸಿನೀರಿನ ಸರೋವರಗಳ ಕೇಂದ್ರವಾಗಿದೆ ಎಂದು ಅಧ್ಯಯನದಲ್ಲಿ ಹೇಳಿದೆ.
ಈ ಆಳವಾದ ಸರೋವರಗಳನ್ನು ಪರೀಕ್ಷಿಸಲು ಮ್ಯಾಗ್ನೆಟಿಕ್ ಸರ್ವೆ ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಲೇಹ್ ಪ್ರದೇಶದ ಚುಮಥಾಂಗ್, ಪನಾಮಿಕ್ ಮತ್ತು ಪುಗಾದಂತಹ ಸರೋವರಗಳಲ್ಲಿ ಒಂದೆಡೆ ಹಿಮ ಬೀಳುವುದರೊಂದಿಗೆ ಬಿಸಿನೀರು ಹರಿಯುತ್ತದೆ ಎಂದು ಸಂಶೋಧಕರು ವಿವರಿಸಿದ್ದಾರೆ. ನಿಗೂಢತೆಯನ್ನು ಗುರುತಿಸಿದರೆ, ಭೌಗೋಳಿಕ ಅಂಶಗಳನ್ನು ಹೆಚ್ಚು ಆಳವಾಗಿ ಪರಿಶೀಲಿಸಲು ಅವಕಾಶವಿದೆ ಎಂದು ಹೇಳಲಾಗುತ್ತದೆ.