ಶಿರಸಿಯ ದಾಸನಕೊಪ್ಪದಲ್ಲಿ ಎನ್‌ಐಎ ದಾಳಿ: ಯುವಕನ ಬಂಧನ

ದಿಗಂತ ವರದಿ ಶಿರಸಿ:

ಎನ್‌ಐಎ ತಂಡ ದಾಳಿ ನಡೆಸಿ ಯುವಕನೋರ್ವನನ್ನು ಬಂಧಿಸಿದ ಘಟನೆ ತಾಲೂಕಿನ ದಾಸನಕೊಪ್ಪ ಗ್ರಾಮದಲ್ಲಿ ನಡೆದಿದೆ.

ಅಬ್ದುಲ್ ಶಕೂರ್ ಬಂತ ಯುವಕನಾಗಿದ್ದು, ನಿಷೇಧಿತ ಪಿಎಫ್‌ಐ ಸಂಘಟನೆಯ ಸದಸ್ಯ ಎನ್ನಲಾಗಿದ್ದು, ಈತ ದುಬೈನಲ್ಲಿ ಕೆಲಸ ಮಾಡುತ್ತಿದ್ದ. ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿದ್ದ ಹಿನ್ನೆಲೆಯಲ್ಲಿ ಈತನನ್ನು ಬಂಧಿಸಲಾಗಿದೆ.

ದುಬೈನಲ್ಲಿ ಕೆಲಸ ಮಾಡಿಕೊಂದಿದ್ದ ಈತ ಬಕ್ರೀದ್ ಆಚರಿಸಲು ಕೆಲ ದಿನಗಳ ಹಿಂದಷ್ಟೇ ದಾಸನಕೊಪ್ಪಕ್ಕೆ ಬಂದಿದ್ದ. ಸಾಮಾಜಿಕ ಜಾಲತಾಣದಲ್ಲಿ ಕೋಮು ದ್ವೇಷ ಸೃಷ್ಟಿಸುವ ಪೋಸ್ಟ್ ಹಾಕಿದ್ದ ಹಿನ್ನೆಲೆಯಲ್ಲಿ ಬನವಾಸಿ ಪೊಲೀಸರ ಸಹಕಾರದಿಂದ ಯುವಕನನ್ನು ಎನ್‌ಎಐ ಬಂಧಿಸಿದೆ.

ಬಂಧಿತ ಯುವಕ ನಿಷೇಧಿತ ಪಿಎಫ್‌ಐ ಸಂಘಟನೆಯ ಸದಸ್ಯ ಆಗಿದ್ದು, ಈತ ದುಬೈನಲ್ಲಿ ಕೆಲಸ ಮಾಡುತ್ತಿದ್ದ. ರಾಮೇಶ್ವರಂ ಕೆಫೆ ಬ್ಲಾಸ್ಟ್, ಕುಕ್ಕರ್ ಬಾಂಬ್ ಬ್ಲಾಸ್ಟ್ ಆರೋಪಿಗಳಿಗೆ ಪ್ರಚೋದನೆ, ಶಿವಮೊಗ್ಗದಲ್ಲಿ ಮಸೀದಿ ಹಾಗೂ ಇತರೆ ಪ್ರದೇಶಗಳಲ್ಲಿ ಬಾಂಬ್ ಬ್ಲಾಸ್ಟ್ ಆರೋಪಿಗಳಿಗೆ ಪ್ರಚೋದನೆ ನೀಡಿರುವ ಆರೋಪ ಈತನ ಮೇಲಿದೆ.

ಆನ್‌ಲೈನ್ ಮೂಲಕ ಭಯೋತ್ಪಾದಕ ಸಂಘಟನೆ ಜತೆ ಸಂಪರ್ಕ ಹಾಗೂ ಪಾಸ್‌ಪೋರ್ಟ್ ನಕಲಿ ದಾಖಲೆ ನೀಡಿದ ಆರೋಪದಡಿ ಆರೋಪಿಯನ್ನು ಬಂಧಿಸಿದ್ದು, ಸದ್ಯ ಆರೋಪಿಗೆ ನೋಟಿಸ್ ನೀಡಿ ಗುಪ್ತ ಸ್ಥಳದಲ್ಲಿ ಎನ್‌ಐಎ ಅಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!