ಇದ್ದಕ್ಕಿದ್ದಂತೆಯೇ ಕಿವಿ ಕೇಳಿಸುತ್ತಿಲ್ಲ, ಬಾಲಿವುಡ್‌ ಫೇಮಸ್‌ ಸಿಂಗರ್‌ ಸ್ಥಿತಿ ಇದು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಹಿರಿಯ ಹಿನ್ನೆಲೆ ಗಾಯಕಿ ಅಲ್ಕಾ ಯಾಗ್ನಿಕ್ ಅವರು ಕಿವುಡತನಕ್ಕೆ ಒಳಗಾಗಿದ್ದೇನೆ ಎಂದು ಭಾವನಾತ್ಮಕ ಪೋಸ್ಟ್‌ ಒಂದನ್ನು ಮಾಡಿದ್ದಾರೆ.

Alka Yagnik reveals she has been diagnosed with 'rare hearing loss', cautions regarding exposure to loud music and headphones: 'A major setback' | Bollywood News - The Indian Expressಇನ್‌ಸ್ಟಾಗ್ರಾಮ್‌ನಲ್ಲಿನ ತಮ್ಮ ಪೋಸ್ಟ್‌ನಲ್ಲಿ, ಅವರು ಕೆಲವು ವಾರಗಳ ಹಿಂದೆ ತನಗೆ ಕೇಳುವುದರಲ್ಲಿ ಸಮಸ್ಯೆ ಎದುರಾಗಿದ್ದು, ಇದನ್ನು ವೈದ್ಯರು ಅಪರೂಪದ ಕಿವುಡುತನ ಎಂದು ರೋಗನಿರ್ಣಯ ಮಾಡಿರುವುದಾಗಿ ಹೇಳಿದ್ದಾರೆ.  ಕೆಲ ದಿನಗಳಿಂದ ತಾವು ಯಾರಿಗೂ ಸಿಗದಿರಲು ಇದೇ ಕಾರಣ ಎಂದು ಗಾಯಕಿ ಬಹಿರಂಗಪಡಿಸಿದ್ದಾರೆ. ಜೂನ್ 17 ರಂದು, ಅಲ್ಕಾ ತಮ್ಮ ಫೋಟೋವನ್ನು ಹಂಚಿಕೊಂಡಿದ್ದು, ಎಲ್ಲರ ಬೆಂಬಲ ಕೋರಿದ್ದಾರೆ.

Alka Yagnik diagnosed with rare hearing disorder: “I am hoping to recalibrate my life and come back to you soon” : Bollywood News - Bollywood Hungama

ಪೋಸ್ಟ್ ಅನ್ನು ಹಂಚಿಕೊಂಡ ಅವರು, ‘ಕೆಲವು ವಾರಗಳ ಹಿಂದೆ, ನಾನು ವಿಮಾನದಿಂದ ಹೊರನಡೆದಾಗ, ನನಗೆ ಏನನ್ನೂ ಕೇಳಲು ಸಾಧ್ಯವಾಗುತ್ತಿಲ್ಲ ಎಂದು ನನಗೆ ಇದ್ದಕ್ಕಿದ್ದಂತೆ ಅನಿಸಿತು. ನಾನು ಎಲ್ಲೂ ಏಕೆ ಕಾಣಿಸುತ್ತಿಲ್ಲ ಎಂದು ಕೇಳುತ್ತಿರುವ ಎಲ್ಲಾ ಸ್ನೇಹಿತರು ಮತ್ತು ಹಿತೈಷಿಗಳಿಗಾಗಿ ನಾನು ಈಗ ಮೌನವನ್ನು ಮುರಿಯಲು ಬಯಸುತ್ತೇನೆ. ವೈರಲ್ ಅಟ್ಯಾಕ್‌ನಿಂದಾಗಿ ಅಪರೂಪದ ಸಂವೇದನಾ ನರಗಳ ಶ್ರವಣ ನಷ್ಟವಾಗಿದೆ ಎಂದು ವೈದ್ಯರು ಹೇಳಿದ್ದಾರೆ, ದಯವಿಟ್ಟು ಲೌಡ್‌ ಮ್ಯೂಸಿಕ್‌ ಹಾಗೂ ಸದಾ ಇಯರ್‌ ಫೋನ್‌ ಬಳಕೆ ಮಾಡಬೇಡಿ ಎಂದು ಸಲಹೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!