PFI ಸದಸ್ಯ ಶಾಹೀದ್ ನಿವಾಸದ ಮೇಲೆ NIA ದಾಳಿ: ಸಿಕ್ಕಿತು ಲಕ್ಷ ಲಕ್ಷ ಹಣ, ಏಳು ಮೊಬೈಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಎನ್ ಐ ಎ ಅಧಿಕಾರಿಗಳಿಂದ ಬಂಧನಕ್ಕೆ ಒಳಗಾಗಿರುವ ಪಿಎಫ್‌ಐ ಸಂಘಟನೆಯ ಶಾಹೀದ್ ಖಾನ್ ನಿವಾಸದಲ್ಲಿ 22 ಲಕ್ಷಕ್ಕೂ ಹೆಚ್ಚು ಹಣ ಹಾಗೂ ಏಳು ಮೊಬೈಲ್ ಗಳನ್ನು ಸೀಜ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಏಳು ಫೋನ್ ಗಳಲ್ಲಿ 5 ಕೀಪ್ಯಾಡ್ ಹಾಗೂ ಎರಡು ಸ್ಮಾರ್ಟ್ ಫೋನ್ ಗಳು ಪತ್ತೆಯಾಗಿದೆ. ಇನ್ನೂ ಆತನ ಬಳಿಯಿದ್ದ ಮೊಬೈಲ್ ನೋಡಿದ ತನಿಖಾಧಿಕಾರಿಗಳೇ ಶಾಕ್ ಆಗಿದ್ದಾರೆ. ಗಲಭೆಕೋರರಿಗೆ ಹಣ ವರ್ಗಾವಣೆ ಮಾಡಿರುವ ಆರೋಪ ಶಾಹೀದ್ ಮೇಲಿದ್ದು, ಆದ್ದರಿಂದ ಎನ್ ಐ ಎ ಅಧಿಕಾರಗಳು ದಾಳಿ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇಂದು ಬೆಳಗ್ಗೆ ವರೆಗೂ ಶಿವಮೊಗ್ಗದಲ್ಲೇ ಶಾಹೀದ್ ನನ್ನು ಅಧಿಕಾರಿಗಳು ವಿಚಾರಣೆ ನಡೆಸಿದ್ದು, ನಂತರ ಬೆಂಗಳೂರಿಗೆ ಕರೆದುಕೊಂಡು ಬರಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!