ತಮಿಳುನಾಡಿನ ಹತ್ತು ಸ್ಥಳಗಳಲ್ಲಿ NIA ದಾಳಿ: ಶಂಕಿತ ಉಗ್ರರ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ತಮಿಳುನಾಡಿನ ಹತ್ತು ಸ್ಥಳಗಳಲ್ಲಿ ಎನ್‌ಐಎ ದಾಳಿ ನಡೆಸಿದ್ದು, ಭಯೋತ್ಪಾದನಾ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಇಬ್ಬರನ್ನು ಅರೆಸ್ಟ್‌ ಮಾಡಿದೆ.

ತಮಿಳುನಾಡಿನ ವಿವಿಧ ಜಿಲ್ಲೆಗಳಲ್ಲಿ ಈ ರೇಡ್‌ ನಡೆದಿದ್ದು, ಅಂತಾರಾಷ್ಟ್ರೀಯ ಭಯೋತ್ಪಾದನಾ ಸಂಘಟನೆ ಹಿಜ್ಬು-ಉತ್‌-ತಹ್ರೀರ್‌ನ ಇಬ್ಬರನ್ನು ಬಂಧಿಸಿದೆ. ಈ ಸಂಘಟನೆಯ ಸ್ಥಾಪಕ ತಾಖಿ ಅಲ್‌ ದಿನ್‌ ಅಲ್‌ ಅಬ್ಬಾನಿ ಬರೆದ ಸಂವಿಧಾನವನ್ನು ಪ್ರಪಂಚಾದ್ಯಂತ ಪಸರಿಸಲು ಪ್ರಯತ್ನ ನಡೆಸುತ್ತಿದ್ದಾರೆ.

ಬಂಧಿತ ಉಗ್ರರನ್ನು ಅಬ್ದುಲ್‌ ರೆಹಮಾನ್‌ ಮತ್ತು ಮುಜಿಬುಲ್‌ ರೆಹಮಾನ್‌ ಅಲಿಯಾಸ್‌ ಮುಜಿಬುಲ್‌ ರೆಹಮಾನ್‌ ಅಲ್ತಾಮ್‌ ಸಾಹೀಬ್‌ ಎಂದು ಗುರುತಿಸಲಾಗಿದೆ. ಇವರಿಬ್ಬರೂ ತಂಜಾವೂರ್‌ ಜಿಲ್ಲೆಯವರಾಗಿದ್ದು, ಇವರಿಬ್ಬರೂ ಯುವಕರನ್ನು ಉಗ್ರ ಸಂಘಟನೆಗೆ ಪ್ರೇರೇಪಿಸಲು ಗುಪ್ತವಾಗಿ ತರಗತಿಗಳನ್ನು ನಡೆಸುತ್ತಿದ್ದಾರೆ. ದೇಶದಲ್ಲಿ ಹಿಂಸಾತ್ಮಕ ಜಿಹಾದ್‌ ಮೂಲಕ ಇಸ್ಲಾಂ ಮೇಲಿನ ನಂಬಿಕೆಯನ್ನು ಮೂಡಿಸಬೇಕಿದೆ ಎಂಬುದನ್ನು ಯುವಕರಿಗೆ ಬೋಧಿಸುತ್ತಿದ್ದರು ಎಂದು ಎನ್‌ಐಎ ಹೇಳಿದೆ.

ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್, ಸಿಮ್ ಮತ್ತು ಮೆಮೊರಿ ಕಾರ್ಡ್‌ಗಳು ಮತ್ತು ಹಿಜ್ಬ್-ಉತ್-ತಹ್ರೀರ್, ಖಿಲಾಫಾ, ಇಸ್ಲಾಮಿಕ್ ಸ್ಟೇಟ್‌ನ ಸಿದ್ಧಾಂತವನ್ನು ಒಳಗೊಂಡಿರುವ ಪುಸ್ತಕಗಳು ಮತ್ತು ಪ್ರಿಂಟ್‌ಔಟ್‌ಗಳು ಅನೇಕ ವಸ್ತುಗಳನ್ನು ಎನ್‌ಐಎ ವಶಪಡಿಸಿಕೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!