ದೇಶದ ಹಲವೆಡೆ ಎನ್‌ಐಎ ದಾಳಿ: ಬೆಂಗಳೂರಿನಲ್ಲಿ ಸ್ಫೋಟಕ ತಯಾರಿಸುವ ಸೋಡಿಯಂ ನೈಟ್ರೇಟ್ ಪತ್ತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ದೇಶಾದ್ಯಂತ 41 ಕಡೆಗಳಲ್ಲಿ ಎನ್‌ಐಎ ದಾಳಿ ನಡೆದಿದ್ದು, ಬೆಂಗಳೂರಿನಲ್ಲಿ ಭಾರೀ ಪ್ರಮಾಣದ ಸ್ಫೋಟಕ ತಯಾರಿಕಾ ವಸ್ತು ಪತ್ತೆಯಾಗಿದೆ.

ಬ್ಯಾಡರಹಳ್ಳಿಯಲ್ಲಿ ವಾಸವಾಗಿದ್ದ ಶಮೀವುಲ್ಲಾ ಎಂಬಾತನ ಮನೆಯಲ್ಲಿ ಏಳು ಕೆಜಿಯಷ್ಟು ಸೋಡಿಯಂ ನೈಟ್ರೇಟ್ ಪತ್ತೆಯಾಗಿದೆ.

ಶಿವಾಜಿನಗರ, ಪುಲಿಕೇಶಿನಗರ, ಸುಲ್ತಾನ್‌ಪಾಳ್ಯ, ಆರ್‌ಟಿ ನಗರ್, ಜೆಸಿ ನಗರ, ಚಿನ್ನಪ್ಪ ಗಾರ್ಡನ್ ಹಾಗೂ ಬಳ್ಳಾರಿಯ ಒಂಬತ್ತು ಕಡೆ ದಾಳಿ ನಡೆಸಲಾಗಿದೆ. ಶಮೀವುಲ್ಲಾ ಸೇರಿ ಹಲವರನ್ನು ಎನ್‌ಐಎ ವಶಕ್ಕೆ ಪಡೆದಿದೆ.

ಈ ಹಿಂದೆ ಕರ್ನಾಟಕ ಸೇರಿದಂತೆ ಮಹಾರಾಷ್ಟ್ರದ 44 ಕಡೆಗಳಲ್ಲಿ ಎನ್‌ಐಎ ದಾಳಿ ನಡೆಸಿತ್ತು. ಬೆಂಗಳೂರಿನಲ್ಲಿ ಶಂಕಿತ ಉಗ್ರ ಅಲಿ ಅಬ್ಬಾಸ್‌ನನ್ನು ಬಂಧಿಸಲಾಗಿತ್ತು. ಆತನ ಬಂಧನ ಸಂಬಂಧ ಇಂದು ಮತ್ತೆ ಎನ್‌ಐಎ ದಾಳಿ ನಡೆದಿದ್ದು, ಸ್ಫೋಟಕ್ಕೆ ಬಳಸುವ ವಸ್ತು ಪತ್ತೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!