ಹೊಸದಿಗಂತ ವರದಿ ಮಂಗಳೂರು:
ಇಲ್ಲಿನ ಎಣ್ಮೂರು ಎಂಬಲ್ಲಿ ಮನೆಯೊಂದರ ಮೇಲೆ ಇಂದು ಅಧಿಕಾರಿಗಳ ತಂಡ ಮಿಂಚಿನ ದಾಳಿ ನಡೆಸಿದ್ದು, ಹಲವು ಮಾಹಿತಿಗಳನ್ನು ಕಲೆಹಾಕಿದೆ.
2023ರ ಬೆಂಗಳೂರಿನ ಪ್ರಕರಣ ಸುಲ್ತಾನ್ ಪಾಳ್ಯ ಘಟನೆಗೆ ಸಂಬಂಧಿಸಿ ಈ ತನಿಖೆ ನಡೆದಿದೆ ಎನ್ನಲಾಗುತ್ತಿದೆಯಾದರೂ ಅಧಿಕಾರಿಗಳು ಮಾತ್ರ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ.
ಇನ್ನು ಪ್ರಕರಣದ ಆರೋಪಿಯೊಂದಿಗೆ ಸಂಪರ್ಕ ಹೊಂದಿದ್ದ ವ್ಯಕ್ತಿಯ ಮನೆಯನ್ನು ಶೋಧಿಸಿರುವ ತಂಡ ಹಲವರನ್ನು ವಿಚಾರಣೆಗೆ ಒಳಪಡಿಸಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.