ಷೇರುಪೇಟೆಯಲ್ಲಿ 18 ಪಾಯಿಂಟ್‌ ಏರಿದ ನಿಫ್ಟಿ: ಸೆನ್ಸೆಕ್ಸ್‌ ಎಷ್ಟಿದೆ ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ದುರ್ಬಲ ಜಾಗತಿಕ ಸೂಚನೆಗಳು ಮತ್ತು ಹೆಚ್ಚಿದ ಕಚ್ಚಾ ತೈಲ ಬೆಲೆಗಳ ನಡುವೆ ಭಾರತೀಯ ಷೇರುಪೇಟೆಯು ಕ್ಷೀಣವಾಗಿ ತೆರೆದಿದೆ. ಎನ್ಎಸ್‌ಇಯ ನಿಫ್ಟಿ 50ಯು 18 ಪಾಯಿಂಟ್‌ಗಳ ಏರಿಕೆ ಕಂಡು 17,950 ಮಟ್ಟದಲ್ಲಿ ವಹಿವಾಟು ನಡೆಸಿದರೆ ಬಿಎಸ್‌ಇ ಸೆನ್ಸೆಕ್ಸ್ 53 ಪಾಯಿಂಟ್ ಅಥವಾ 0.1 ರಷ್ಟು ಏರಿಕೆ ಕಂಡು 60,351ಕ್ಕೆ ತಲುಪಿದೆ.

ಟಾಪ್ ಗೇನರ್‌ಗಳು ಮತ್ತು ಟಾಪ್‌ ಲೂಸರ್ಸ್:‌
ಅಲ್ಟ್ರಾಟೆಕ್ ಸಿಮೆಂಟ್, ವಿಪ್ರೋ, ಇನ್ಫೋಸಿಸ್, ಟೆಕ್ ಮಹೀಂದ್ರಾ, ಐಷರ್ ಮೋಟಾರ್ಸ್, ಒಎನ್‌ಜಿಸಿ ಗಳು ಅಗ್ರ ವಿಜೇತರಾಗಿ ಹೊರ ಹೊಮ್ಮಿವೆ.

ಇಂಡಸ್‌ಇಂಡ್ ಬ್ಯಾಂಕ್, ಕೋಲ್ ಇಂಡಿಯಾ, ರಿಲಯನ್ಸ್ ಇಂಡಸ್ಟ್ರೀಸ್, ಎನ್‌ಟಿಪಿಸಿ ಗಳು ನಷ್ಟ ಕಂಡಿವೆ.

ವಿಶಾಲ ಮಾರುಕಟ್ಟೆಗಳಲ್ಲಿ ನಿಫ್ಟಿ ಮಿಡ್‌ಕ್ಯಾಪ್ 100 ಮತ್ತು ನಿಫ್ಟಿ ಸ್ಮಾಲ್‌ಕ್ಯಾಪ್ 100 ಗಳು ಬೆಂಚ್‌ಮಾರ್ಕ್ ಸೂಚ್ಯಂಕಗಳನ್ನು ಮೀರಿಸಿ 0.4 ಶೇಕಡಾ ವರೆಗೆ ಏರಿಕೆಯಾಗಿದೆ. ವಲಯವಾರು ನಿಫ್ಟಿ ಮೀಡಿಯಾ, ನಿಫ್ಟಿ ಫಾರ್ಮಾ, ನಿಫ್ಟಿ ಮೆಟಲ್ ಲಾಭಗಳಿಸಿವೆ. ನಿಫ್ಟಿ ರಿಯಾಲ್ಟಿ, ನಿಫ್ಟಿ ಬ್ಯಾಂಕ್, ನಿಫ್ಟಿ ಎಫ್‌ಎಂಸಿಜಿ, ನಷ್ಟವನ್ನು ಅನುಭವಿಸಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!