Monday, January 30, 2023

Latest Posts

ಮಧ್ಯ ನೈಜೀರಿಯಾದಲ್ಲಿ ಮರಣ ಮೃದಂಗ: ಬಾಂಬ್ ಸ್ಫೋಟಗೊಂಡು 50 ಮಂದಿ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನೈಜೀರಿಯಾದ ಉತ್ತರ-ಮಧ್ಯ ಪ್ರದೇಶದಲ್ಲಿ ಶಂಕಿತ ಬಾಂಬ್ ಸ್ಫೋಟಗೊಂಡು ದನಗಾಹಿಗಳು ಮತ್ತು ವೀಕ್ಷಕರು ಸೇರಿದಂತೆ 50ಮಂದಿ ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದಾರೆ ಎಂದು ರಾಜ್ಯ ಸರ್ಕಾರಿ ಅಧಿಕಾರಿ ಮತ್ತು ರಾಷ್ಟ್ರೀಯ ಜಾನುವಾರು ಸಾಕಣೆದಾರರ ವಕ್ತಾರರು ತಿಳಿಸಿದ್ದಾರೆ. ದುರಂತದಲ್ಲಿ ಕಾನುವಾರುಗಳೂ ಕೂಡ ಪ್ರಾಣ ಕಳೆದುಕೊಂಡಿವೆ.

ಉತ್ತರ ಮಧ್ಯ ನೈಜೀರಿಯಾದ ನಸರವಾ ಮತ್ತು ಬೆನ್ಯೂ ರಾಜ್ಯಗಳ ನಡುವೆ ಈ ಘಟನೆ ನಡೆದಿದೆ. ನೈಜೀರಿಯಾದ ಮಿಯೆಟ್ಟಿ ಅಲ್ಲಾ ಕ್ಯಾಟಲ್ ಬ್ರೀಡರ್ಸ್ ಅಸೋಸಿಯೇಶನ್‌ನ ವಕ್ತಾರ ತಸಿಯು ಸುಲೇಮಾನ್, ಫುಲಾನಿ ದನಗಾಹಿಗಳ ಗುಂಪು ತಮ್ಮ ಜಾನುವಾರುಗಳನ್ನು ಬೆನ್ಯೂದಿಂದ ನಸರಾವಾಕ್ಕೆ ಸಾಗಿಸುತ್ತಿದ್ದರು, ಅಧಿಕಾರಿಗಳು ಮೇಯಿಸುವಿಕೆ ವಿರೋಧಿ ಕಾನೂನುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪ್ರಾಣಿಗಳನ್ನು ವಶಪಡಿಸಿಕೊಳ್ಳುವಾಗ ಸ್ಫೋಟ ಸಂಭವಿಸಿದೆ.

ಮಧ್ಯ ನೈಜೀರಿಯಾದಲ್ಲಿ ದನಗಾಹಿಗಳು ಮತ್ತು ರೈತರು ಜಾನುವಾರುಗಳಿಗೆ ಮೇವು ಮತ್ತು ನೀರಿನ ಕೊರತೆಯಿಂದಾಗಿ ಅಲ್ಲಿನ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ದಶಕಗಳ ಕಾಲದ ಈ ಸಂಘರ್ಷ ಇದೀಗ ಜನಾಂಗೀಯ ಮತ್ತು ಧಾರ್ಮಿಕ ಆಯಾಮ ಪಡೆದಿದೆ.

ಸ್ಫೋಟದ ಹಿಂದೆ ಯಾರಿದ್ದಾರೆ ಎಂದು ಸ್ಪಷ್ಟಪಡಿಸಿಲ್ಲ. ಘಟನೆ ನಡೆದ ಸ್ಥಳದಲ್ಲಿ ಮತ್ತಷ್ಟು ಜನರಿಗಾಗಿ ಶೋಧ ನಡೆಯುತ್ತಿದ್ದು ಸಾವಿನ ಸಂಖ್ಯೆ ಮತ್ತಷ್ಟು ಏರುವ ಸಾಧ್ಯತೆ ಇದೆ. ಪೊಲೀಸ್, ಬಾಂಬ್ ತಜ್ಞರು ಸ್ಫೋಟದ ಮೂಲದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ನಸರವಾ ಪೊಲೀಸ್ ಕಮಿಷನರ್ ಮೈಯಾಕಿ ಮಹಮ್ಮದ್ ಬಾಬಾ ಮಾಹಿತಿ ನೀಡಿದ್ದಾರೆ.

ರಾಜ್ಯಪಾಲರ ವಕ್ತಾರ ಅಬುಬಕರ್ ಲಾಡಾನ್ ರಾಯಿಟರ್ಸ್‌ಗೆ ನೀಡಿದ ಮಾಹಿತಿ ಪ್ರಕಾರ, ಹತ್ಯೆಯಾದವರನ್ನು ಸಾಮೂಹಿಕ ಸಮಾಧಿ ಮಾಡಲಾಯಿತು ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!