ಹೊಸದಿಗಂತ ಡಿಜಿಟಲ್ ಡೆಸ್ಕ್:
ಶುಕ್ರವಾರ ಉತ್ತರ ನೈಜೀರಿಯಾದ ನೈಜರ್ ನದಿಯ ಉದ್ದಕ್ಕೂ ಆಹಾರ ಮಾರುಕಟ್ಟೆಗೆ ಸಾಗಿಸುತ್ತಿದ್ದ ದೋಣಿಯೊಂದು ಮುಳುಗಿದ ನಂತರ ಕನಿಷ್ಠ 27 ಜನರು ಸಾವನ್ನಪ್ಪಿದರು ಮತ್ತು 100 ಕ್ಕೂ ಹೆಚ್ಚು ಮಹಿಳೆಯರು ಕಾಣೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೋಗಿ ರಾಜ್ಯದಿಂದ ನೆರೆಯ ರಾಜ್ಯವಾದ ನೈಜರ್‌ಗೆ ಹೋಗುತ್ತಿದ್ದ ದೋಣಿಯಲ್ಲಿ ಸುಮಾರು 200 ಪ್ರಯಾಣಿಕರಿದ್ದರು ಎಂದು ನೈಜರ್ ರಾಜ್ಯ ತುರ್ತು ನಿರ್ವಹಣಾ ಏಜೆನ್ಸಿಯ ವಕ್ತಾರ ಇಬ್ರಾಹಿಂ ಔಡು ಅಸೋಸಿಯೇಟೆಡ್ ಪ್ರೆಸ್‌ಗೆ ತಿಳಿಸಿದ್ದಾರೆ.
ಕೋಗಿ ರಾಜ್ಯ ತುರ್ತು ಸೇವೆಗಳ ವಕ್ತಾರ ಸಾಂಡ್ರಾ ಮೂಸಾ ಪ್ರಕಾರ, ಸ್ಥಳೀಯ ಡೈವರ್‌ಗಳು ಇನ್ನೂ ಇತರರನ್ನು ಹುಡುಕುತ್ತಿರುವಾಗ ರಕ್ಷಕರು ಶುಕ್ರವಾರ ಸಂಜೆಯ ವೇಳೆಗೆ 27 ಶವಗಳನ್ನು ನದಿಯಿಂದ ಹೊರತೆಗೆಯುವಲ್ಲಿ ಯಶಸ್ವಿಯಾದರು. ಘಟನೆ ಸಂಭವಿಸಿ ಸುಮಾರು 12 ಗಂಟೆಗಳ ನಂತರ ಬದುಕುಳಿದವರು ಪತ್ತೆಯಾಗಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಳುಗಡೆಗೆ ಕಾರಣವೇನು ಎಂಬುದನ್ನು ಅಧಿಕಾರಿಗಳು ದೃಢಪಡಿಸಿಲ್ಲ ಆದರೆ ಸ್ಥಳೀಯ ಮಾಧ್ಯಮಗಳು ಬೋಟ್ ಓವರ್‌ಲೋಡ್ ಆಗಿರಬಹುದು ಎಂದು ಸೂಚಿಸಿವೆ. ನೈಜೀರಿಯಾದ ದೂರದ ಭಾಗಗಳಲ್ಲಿ ದೋಣಿಗಳಲ್ಲಿ ಜನದಟ್ಟಣೆ ಸಾಮಾನ್ಯವಾಗಿದ್ದು, ಇದೆ ಈ ಘಟನೆಗೆ ಕಾರಣವಾಯ್ತಾ ಅನ್ನೋದು ಇನ್ನಷ್ಟೇ ತಿಳಿಯಬೇಕಾಗಿದೆ.