Thursday, February 9, 2023

Latest Posts

SELF CARE | ಅಂದದ ತ್ವಚೆಯನ್ನು ಕಾಪಾಡಿಕೊಳ್ಳಲು ರಾತ್ರಿ ಹೀಗೆ ಮಾಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಚಳಿಗಾಲದಲ್ಲಿ ತ್ವಚೆಯನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳುವುದು ಒಂದು ಸವಾಲು ಎಂದರೆ ತಪ್ಪಿಲ್ಲ. ಹಾಗಾಗಿ ಚಳಿಗಾಲದಲ್ಲಿ ನಿಮ್ಮ ತ್ವಚೆಯನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳಲು ರಾತ್ರಿ ಮಲಗುವ ಮುನ್ನ ಏನೆಲ್ಲಾ ಮಾಡ್ಬೇಕು ಎನ್ನುವ ಉಪಯುಕ್ತ ಮಾಹಿತಿ ಇಲ್ಲಿದೆ.

* ಹಾಲಿನಲ್ಲಿ ಮುಖಕ್ಕೆ ಫೇಸ್‌ ಪ್ಯಾಕಿ, ಇದರಿಂದ ತ್ವಚೆ ಮೃದುವಾಗುವುದು, ಅಲ್ಲದೆ ತ್ವಚೆಯ ಮಾಯಿಶ್ಚರೈಸರ್‌ ಕಾಪಾಡುತ್ತದೆ.

* ಓಟ್ಸ್‌ ಅಥವಾ ಕಾಫಿ ಸ್ಕ್ರಬ್‌ ಬಳಸಿ ತ್ವಚೆಯನ್ನು ಎಕ್ಸ್‌ಫೋಲೆಟ್ ಮಾಡಿ.

* ಕಾಫಿ ಪುಡಿ ಸ್ವಲ್ಪ ಹಾಲು ಹಾಕಿ ಮಿಶ್ರಣ ಮಾಡಿ ಸ್ಕ್ರಬ್ಬರ್‌ ಆಗಿ ಬಳಸುವುದು ಅಥವಾ ಓಟ್ಸ್‌ಗೆ ಹಾಲು ಹಾಕಿ ಮಿಶ್ರಣ ಮಾಡಿ ಸ್ಕ್ರಬ್ಬರ್ ಆಗಿ ಬಳಸಬಹುದು. ಇದು ಡೆಡ್‌ಸ್ಕಿನ್‌ ತೆಗೆದು ಮುಖದ ಹೊಳಪು ಹೆಚ್ಚಿಸುತ್ತದೆ.

* ಚಳಿಗಾಲದಲ್ಲಿ ಪ್ರತಿದಿನ ಮುಖಕ್ಕೆ ಎಣ್ಣೆ ಮಸಾಜ್‌ ಒಳ್ಳೆಯದು. ಅದರಲ್ಲೂ ವಾರದಲ್ಲಿ ಎರಡು ಬಾರಿ ಕಂಪ್ಲೀಟ್‌ ಬಾಡಿಗೆ ಎಣ್ಣೆ ಹಚ್ಚಿ ಸ್ನಾನ ಮಾಡಿ.

* ನಿಮ್ಮ ತ್ವಚೆಗೆ ತಕ್ಕ ಕ್ರೀಮ್, ಮಾಯಿಶ್ಚರೈಸರ್‌ ಬಳಸಿ ಎಲ್ಲಾ ಕ್ರೀಮ್‌, ಮಾಯಿಶ್ಚರೈಸರ್‌ ನಿಮಗೆ ಸೂಕ್ತ ಎಂದು ಹೇಳಲು ಸಾಧ್ಯವಿಲ್ಲ.

* ವಾರಕ್ಕೊಮ್ಮೆ ಹೈಡ್ರೇಟಿಂಗ್ ಫೇಸ್‌ಮಾಸ್ಕ್‌ ಒಳ್ಳೆಯದು ಫೇಸ್‌ಮಾಸ್ಕ್ ತಯಾರಿಸಿ ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆಯಿರಿ. ನಿಮ್ಮ ಮುಖಕ್ಕೆ ಸೂಟ್‌ ಆಗುವ ಫೇಸ್‌ ಮಾಸ್ಕ್ ಬಳಸಿ. ನಂತರ ಹದ ಬಿಸಿ ನೀರಿನಿಂದ ತೊಳೆಯಿರಿ.

* ಬಾಳೆಹಣ್ಣು ಮ್ಯಾಶ್‌ ಮಾಡಿ ಅದಕ್ಕೆ ಜೇನು ಬೆರೆಸಿ ಮುಖಕ್ಕೆ ಹಚ್ಚಬಹುದು.

* ಜೇನು ಮುಖಕ್ಕೆ ಹಚ್ಚಬಹುದು

* ಜೇನು+ಗ್ಲಿಸರಿನ್‌ ಮಿಕ್ಸ್ ಮಾಡಿ ಹಚ್ಚಬಹುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!