ನಿಜ್ಜರ್‌ ಹತ್ಯೆ ಪ್ರಕರಣ । ಮೂವರು ಭಾರತೀಯರ ಬಂಧನ? ಜೈಶಂಕರ್​ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಖಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ವಿಷಯವಾಗಿ ಕೆನಡಾದಲ್ಲಿ ಆಂತರಿಕ ರಾಜಕೀಯಕ್ಕೆ ಕಾರಣವಾಗಿದ್ದು, ಅದಕ್ಕೂ ಭಾರತಕ್ಕೂ ಯಾವುದೇ ಸಂಬಂಧವಿಲ್ಲ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್(S Jaishankar) ಹೇಳಿದ್ದಾರೆ.

ನಿಜ್ಜರ್ ಹತ್ಯೆ ಆರೋಪದಡಿ ಮೂವರು ಭಾರತೀಯ ಮೂಲದವರನ್ನು ಕೆನಡಾದಲ್ಲಿ ಅರೆಸ್ಟ್ ಮಾಡಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ವಿದೇಶಾಂಗ ಸಚಿವ ಎಸ್ ಜೈಶಂಕರ್, ಕೆನಡಾ ನಾಟಕವನ್ನು ಬಯಲು ಮಾಡಿದ್ದಾರೆ. ನಿಕಳೆದೊಂದು ವರ್ಷದಿಂದ ಕೆನಾಡ ಸರ್ಕಾರ ಭಾರತದ ಮೇಲೆ ಆರೋಪ ಮಾಡುತ್ತಲೇ ಇದೆ. ಆದರೆ ಒಂದೇ ಒಂದು ಸಾಕ್ಷ್ಯ ಒದಗಿಸಿಲ್ಲ ಎಂದು ಜೈಶಂಕರ್ ಹೇಳಿದ್ದಾರೆ.

ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಕೆನಾಡಾ ತನಿಖಾ ಎಜೆನ್ಸಿ, ಗ್ಯಾಂಗ್‌ಸ್ಟರ್ ಕರಣ್ ಬ್ರಾರ್, ಕಮಲಪ್ರೀತ್ ಸಿಂಗ್ ಹಾಗೂ ಕರಣಪ್ರೀತ್ ಸಿಂಗ್ ಅರೆಸ್ಟ್ ಮಾಡಿದೆ. ಇದೀಗ ಅರೆಸ್ಟ್ ಆಗಿರುವ ಮೂವರಿಗೆ ಭಾರತ ಎಜೆನ್ಸಿಗಳ ಜೊತೆ ಸಂಬಂಧವಿದೆಯಾ ಅನ್ನೋ ಕುರಿತು ತನಿಖೆ ನಡೆಯುತ್ತಿದೆ. ಈ ಬಂಧನ ಕುರಿತು ಜೈಶಂಕರ್ ಪ್ರತಿಕ್ರಿಯಿಸಿದ್ದಾರೆ.

ನಿಜ್ಜರ್ ಹತ್ಯೆ ಹಾಗೂ ಅದರ ತನಿಖಾ ಭಾಗವಾಗಿ ಆಗಿರುವ ಅರೆಸ್ಟ್ ಕೆನಡಾದ ಆಂತರಿಕ ವಿಚಾರ. ಕೆನಡಾದ ಆಂತರಿಕ ವಿಚಾರದಲ್ಲಿ ಭಾರತ ಮೂಗು ತೂರಿಸುವುದಿಲ್ಲ ಎಂದಿದ್ದಾರೆ.

ಕೆನಾಡ ಕಳೆದೊಂದು ವರ್ಷದಿಂದ ಸತತವಾಗಿ ಭಾರತದ ಮೇಲೆ ಆರೋಪ ಹೊರಿಸುತ್ತಿದೆ. ನಿಜ್ಜರ್ ಹತ್ಯೆ ಹಿಂದೆ ಭಾರತದ ಕೈವಾಡವಿದೆ ಅನ್ನೋ ಆರೋಪವನ್ನು ಮಾಡುತ್ತಲೇ ಬಂದಿದ್ದಾರೆ. ಆದರೆ ಇದಕ್ಕೆ ಪೂರಕವಾಗಿ ಯಾವುದೇ ಸಾಕ್ಷ್ಯಗಳನ್ನು ಒದಗಿಸಿಲ್ಲ. ಭಾರತ ಸರ್ಕಾರ ಅಧಿಕೃತವಾಗಿ ದಾಖಲೆ ಹಾಗೂ ಸಾಕ್ಷ್ಯ ಒದಗಿಸುವಂತೆ ಕೆನಾಡಗೆ ಕೇಳಿಕೊಂಡಿದೆ ಎಂದು ಜೈಶಂಕರ್ ಹೇಳಿದ್ದಾರೆ.

ಸದ್ಯ ಬಂಧಿತವಾಗಿರುವ ಮೂವರು ಭಾರತೀಯ ಮೂಲದವರಾಗಿದ್ದು, ಕೆನಾಡದಲ್ಲಿ ನೆಲಸಿದ್ದರು. ಇವರಿಗೆ ಕೆಲ ಗ್ಯಾಂಗ್ ಹಿನ್ನಲೆಯಿದೆ. ಈ ಕುರಿತು ಕೆನಡಾ ತನಿಖಾ ಎಜೆನ್ಸಿಗಳು, ಪೊಲೀಸರು ಸಾಕ್ಷ್ಯ ನೀಡಬೇಕಿದೆ. ಭಾರತ ಈ ವರದಿಗಾಗಿ ಕಾಯುತ್ತಿದೆ ಎಂದು ಜೈಶಂಕರ್ ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!