ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿರ್ಮಲಾ ಸೀತಾರಾಮನ್ ಅವರೇ, ನಿಮ್ಮ ಪ್ರಯತ್ನಗಳಿಗೆ ಹಾಗೂ ಈ ದೇಶಕ್ಕೆ ನೀವು ನೀಡಿರುವ ಕೊಡುಗೆಗಳ ಬಗ್ಗೆ ನಮಗೆ ಬಹಳ ಮೆಚ್ಚುಗೆ ಇದೆ. ಆದರೆ, ಮಧ್ಯಮ ವರ್ಗದವರಿಗೆ ಸ್ವಲ್ಪ ರಿಲೀಫ್ ಕೊಡಲು ಯೋಚಿಸಬೇಕೆಂದು ಸವಿನಯದಿಂದ ಕೋರುತ್ತೇನೆ. ಇದರಲ್ಲಿ ಬಹಳ ಸಮಸ್ಯೆ ಇರುವುದನ್ನು ಅರಿತುಕೊಳ್ಳಬಲ್ಲೆ. ಆದರೆ, ಇದು ನನ್ನ ಕಳಕಳಿಯ ಮನವಿಯಷ್ಟೇ.. ಎಂದು ಜನಸಾಮಾನ್ಯರೊಬ್ಬರು ಟ್ವೀಟ್ ಮಾಡಿದ್ದು, ಅದಕ್ಕೆ ಸಚಿವೆ ನಿರ್ಮಲಾ ಸೀತಾರಾಮನ್ ರಿಪ್ಲೇ ಮಾಡಿದ್ದಾರೆ.
ನಿಮ್ಮ ಒಳ್ಳೆಯ ಮಾತುಗಳಿಗೆ ಮತ್ತು ತಿಳಿವಳಿಕೆಗೆ ಧನ್ಯವಾದಗಳು. ನಿಮ್ಮ ಕಾಳಜಿಯನ್ನು ನಾನು ಶ್ಲಾಘಿಸುತ್ತೇನೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಸ್ಪಂದನಶೀಲ ಸರ್ಕಾರವಾಗಿದೆ. ಜನರ ಧ್ವನಿಗಳನ್ನು ಆಲಿಸುತ್ತದೆ. ನಿಮ್ಮ ಅನಿಸಿಕೆ ಅಮೂಲ್ಯವಾದುದು ಎಂದು ನಿರ್ಮಲಾ ಸೀತಾರಾಮನ್ ಸ್ಪಂದಿಸಿದ್ದಾರೆ.
ಈ ರಿಪ್ಲೆ ನೋಡಿದ ಜನರಿಗೆ ಟ್ಯಾಕ್ಸ್‌ನಲ್ಲಿ ಏನಾದರೂ ಬದಲಾವಣೆ ಆಗಬಹುದು ಎನ್ನುವ ವಿಶ್ವಾಸ ಮೂಡಿದೆ. ಸಚಿವೆಯ ಈ ಪೋಸ್ಟ್ಗೆ ಬಹಳಷ್ಟು ಜನರು ಋಣಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ.