ಹೊಸದಿಗಂತ ಡಿಜಿಟಲ್ ಡೆಸ್ಕ್:
ಆರ್ಟ್ ಆಫ್ ಲಿವಿಂಗ್ ಆಶ್ರಮ ದೀಪದ ಬೆಳಕಿನಿಂದ ಹೊಳೆಯುತ್ತಿದೆ. ಭಕ್ತಿ ಹಾಗೂ ಬೆಳಕಿನ ಸಮಾಗಮವಾದ ಕಾರ್ತಿಕ ದೀಪೋತ್ಸವವನ್ನು ಇಲ್ಲಿ ಅದ್ಧೂರಿಯಾಗಿ ಆಚರಿಸಲಾಗಿದೆ.
ಭಗವಾನ್ ಶಿವ ಮತ್ತು ಭಗವಾನ್ ಮುರುಗನ ಪೌರಾಣಿಕ ಕಥಗಳ ಆಧಾರವನ್ನು ಹೊಂದಿರುವ ಈ ಹಬ್ಬವನ್ನು, ಆಂತರ್ಯದ ಜಾಗೃತಿಯ ಸೂಚಕವಾದ ದೀಪಗಳನ್ನು ಬೆಳಗಿಸಿ ಆಚರಿಸಲಾಗುತ್ತದೆ. ಜಗನ್ಮಾತೆ ಪಾರ್ವತಿಯ ಪುತ್ರನಾದ ಕಾರ್ತಿಕೆಯನ ದೈವೀ ಬೆಳಕನ್ನು, ಬೆಳಗಿಸಲಾಗುವ ದೀಪಗಳು ಸೂಚಿಸುತ್ತವೆ. ಈ ದೈವೀ ಬೆಳಕು ಭಕ್ತರನ್ನು ಜ್ಞಾನ, ಸಾಮರಸ್ಯ ಮತ್ತು ಆಧ್ಯಾತ್ಮಿಕ ಜಾಗೃತಿಯತ್ತ ಕರೆದೊಯ್ಯುತ್ತದೆ ಎಂಬ ನಂಬಿಕೆಯಿದೆ. ಈ ಶುಭ ಸಂದರ್ಭದಲ್ಲಿ ತಮಿಳುನಾಡಿನ ಭಕ್ತರು ಎಲ್ಲಾ ಮುರುಗನ ದೇವಸ್ಥಾನಗಳಲ್ಲೂ ವಿಶೇಷ ಪೂಜೆಗಳನ್ನು ಸಲ್ಲಿಸುತ್ತಾರೆ.