ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರತೀ ಬಾರಿ ಬಜೆಟ್ ಮಂಡನೆಯಲ್ಲಿಯೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ವೇಳೆ ಯಾವ ರೀತಿಯ ಸೀರೆ ಉಡುತ್ತಾರೆ ಎನ್ನುವ ವಿಷಯ ಮುನ್ನಲೆಗೆ ಬಂದೇ ಬರುತ್ತದೆ. ಪ್ರತಿ ಬಾರಿಯೂ ವಿಭಿನ್ನವಾದ ಸೀರೆ ಉಡುವ ಸಚಿವೆ ಈ ಬಾರಿ ಬಿಳಿ ಹಾಗೂ ನೇರಳೆ ಬಾರ್ಡರ್ ಇರುವ ರೇಷ್ಮೆ ಸೀರೆಯನ್ನು ಉಟ್ಟಿದ್ದಾರೆ.
ತನ್ನ ದಾಖಲೆ ಮುರಿಯುವ ಏಳನೇ ಕೇಂದ್ರ ಬಜೆಟ್ ಮಂಡನೆಗಾಗಿ, ವಿತ್ತ ಸಚಿವರು ಬಿಳಿ ರೇಷ್ಮೆ ಸೀರೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಜೊತೆಗೆ ಗೋಲ್ಡನ್ ಮೋಟಿಫ್‌ಗಳಿಂದ ಅಲಂಕರಿಸಲ್ಪಟ್ಟ ಮೆಜೆಂಟಾ ಬಾರ್ಡರ್ ಕೂಡ ಇದೆ.
ಪ್ರತಿ ವರ್ಷವೂ ನಿರ್ಮಲಾ ಅವರು ಧರಿಸಿರುವ ಸೀರೆ ಮೇಲೆ ಎಲ್ಲರ ಗಮನವೂ ಬಂದು ಹೋಗೋದಂತೂ ಸಾಮ್ಯವಾಗಿದೆ. ಶಾಂತಿಯ ಸಂಕೇತವಾದ ಬಿಳಿ ಬಣ್ಣದ ಸೀರೆಯನ್ನು ಈ ಬಾರಿ ಧರಿಸಲಾಗಿದೆ.
ಈ ಹಿಂದೆ ಕಸೂತಿ ಕಲೆ ಇರುವ ಸೀರೆ, ಮಂಗಳಗಿರಿ ಸೀರೆ, ಪೋಚಂಪಲ್ಲಿ ಹಾಗೂ ಕೈಮಗ್ಗದ ಸೀರೆಯನ್ನು ಕೂಡ ಉಟ್ಟಿದ್ದರು.