ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರೇಮಂ, ಬ್ಯಾಂಗ್ಲೂರ್ ಡೇಸ್ ಸಿನಿಮಾಗಳಿಂದ ಮನೆಮಾತಾಗಿದ್ದ ಮಲಯಾಳಂ ಖ್ಯಾತ ನಟ ನಿವಿನ್ ಪೌಲಿ ಇದೀಗ ಒಟಿಟಿ ಜಗತ್ತಿಗೆ ಕಾಲಿಟ್ಟಿದ್ದಾರೆ.
ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗುವ ಫಾರ್ಮ ಸೀರೀಸ್‌ನಲ್ಲಿ ನಿವಿನ್ ಕಾಣಿಸಲಿದ್ದು, ವೆಬ್ ಸೀರೀಸ್ ಒಂದೊಳ್ಳೆ ಅನುಭವ ಎಂದಿದ್ದಾರೆ.
ಫೈನಲ್ಸ್ ಸಿನಿಮಾದಿಂದ ಹೆಸರು ಮಾಡಿದ ಪಿಆರ್ ಅರುಣ್ ಫಾರ್ಮಾಗೆ ಆಕ್ಷನ್ ಕಟ್ ಹೇಳ್ತಿದ್ದಾರೆ. ಇತ್ತೀಚೆಗೆ ನಿವಿನ್ ಯಾವ ಸಿನಿಮಾವೂ ಹಿಟ್ ಆಗಿಲ್ಲ, ಇದೀಗ ಫಾರ್ಮಾಗೆ ಫ್ಯಾನ್ಸ್ ಬೆಂಬಲ ನೀಡ್ತಾರಾ? ಕಾದುನೋಡಬೇಕಿದೆ.