November 24, 2026
Tuesday, November 24, 2026
spot_img

ವಿದೇಶಗಳಂತೆ ಬೆಂಗಳೂರಿಗೂ ಬರಲಿದೆಯಾ ʼನೋ ಸ್ಮೋಕಿಂಗ್‌ ಝೋನ್‌ʼ! ಸರ್ಕಾರ ಹೇಳೋದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವಿದೇಶಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವಂತಿಲ್ಲ. ಈ ನಿಯಮವನ್ನು ಜನ ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಸ್ವಲ್ಪ ತಪ್ಪಾದರೂ ದಂಡ ಪಾವತಿ ಮಾಡಬೇಕಾಗುತ್ತದೆ. ಅದೇ ರೀತಿಯಲ್ಲಿಯೂ ನಮ್ಮ ಬೆಂಗಳೂರಿನಲ್ಲಿ ಸ್ಮೋಕಿಂಗ್‌ ಫ್ರೀ ಝೋನ್‌ ಜಾರಿಗೆ ತರಲು ಪ್ರಸ್ತಾವನೆ ಸಿದ್ಧಪಡಿಸಲಾಗಿದೆ.

ಹೊಟೇಲ್‌, ಬಾರ್‌, ಪಬ್‌, ರೆಸ್ಟೋರೆಂಟ್‌ ಹಾಗೂ ಕ್ಲಬ್‌ಗಳಲ್ಲಿ ಸ್ಮೋಕಿಂಗ್‌ ಫ್ರೀ ಝೋನ್‌ ಜಾರಿಗೆ ತರುವ ಪ್ರಸ್ತಾವನೆಯನ್ನು ಆರೋಗ್ಯ ಇಲಾಖೆ ನೀಡಲು ಸಿದ್ಧವಾಗಿದೆ. ಆರೋಗ್ಯ ತಜ್ಞರ ಸಮಿತಿ ಆರೋಗ್ಯ ಇಲಾಖೆ ಹಾಗೂ ಸಿಎಂ ಡಿ.ಕೆ. ಶಿವಕುಮಾರ್‌ ಅವರಿಗೆ ಪ್ರಸ್ತಾವನೆ ಸಲ್ಲಿಸಿದೆ. ಈ ಪ್ರಸ್ತಾವನೆ ಜಾರಿಯಾದರೆ ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಹೊಗೆಗೆ ಕಡಿವಾಣ ಬೀಳುವ ಸಾಧ್ಯತೆಯಿದೆ.

ಸಿಗರೇಟ್‌ ಸೇದುವವರಿಗೆ ಆರೋಗ್ಯ ಹಾನಿ ಖಂಡಿತ. ಆದರೆ ಸಿಗರೇಟ್‌ ಸೇದದೇ ಸಿಗರೇಟ್‌ ಸೇದುವವರ ಸುತ್ತಮುತ್ತ ನಿಂತು ಹೊಗೆ ಕುಡಿದವರಿಗೂ ಆರೋಗ್ಯ ಸಮಸ್ಯೆ ಕಟ್ಟಿಟ್ಟ ಬುತ್ತಿಯಾಗಿದೆ. ಧೂಮಪಾನದಿಂದಾಗಿ ಸಿಗರೇಟ್‌ನ ವಿಷಾನಿಲವನ್ನು ಸಾರ್ವಜನಿಕರು ತೆಗೆದುಕೊಳ್ಳಬೇಕಾಗುತ್ತದೆ. ಪ್ಯಾಸಿವ್‌ ಸ್ಮೋಕಿಂಗ್‌ನಿಂದಾಗಿ ಇತರ ಜನರಿಗೆ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗಲಿವೆ. ಹೀಗಾಗಿ ಕಠಿಣ ಕ್ರಮಕ್ಕೆ ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ.

ಹೊಟೇಲ್‌, ಪಬ್‌, ಕ್ಲಬ್‌, ರೆಸ್ಟೋರೆಂಟ್‌ಗಳಲ್ಲಿ ಧೂಮಪಾನಕ್ಕೆ ಅವಕಾಶ ನೀಡಬಾರದು. ಇನ್ನು ಐಟಿ ಬಿಟಿ ಕಂಪನಿಗಳಲ್ಲಿ ಸ್ಮೋಕಿಂಗ್‌ ಝೋನ್‌ ಇದ್ದರೂ ಅಲ್ಲಿ ಸ್ಮೋಕ್‌ ಮಾಡದೇ ಕಂಪನಿಯಿಂದ ಹೊರಕ್ಕೆ ಬಂದು ಸ್ಮೋಕ್‌ ಮಾಡಲಾಗುತ್ತಿದೆ. ಇದು ಬಂದ್‌ ಆಗಬೇಕು. ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ಹೇಳಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನಕ್ಕೆ ನಿರ್ಬಂಧ ವಿಧಿಸುವ ಪ್ರಸ್ತಾವನೆ ಕುರಿತು ಆರೋಗ್ಯ ಸಚಿವ ಯು.ಟಿ. ಖಾದರ್ ಕೂಡ ಪ್ರಸ್ತಾಪಿಸಿದ್ದಾರೆ. ಈ ವಿಚಾರವನ್ನು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ, ಮುಂದಿನ ಹಂತದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Must Read