ಯಾವುದೇ ಕಾರಣಕ್ಕೂ ಪಕ್ಷ ವಿರೋಧಿ ಚಟುವಟಿಕೆ ಮಾಡಬಾರದು: ಅಸಮಾಧಾನಿತ ನಾಯಕರಿಗೆ ಶಾ ವಾರ್ನಿಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್‌: 

ಟಿಕೆಟ್ (BJP Ticket) ಘೋಷಣೆ ಆದ ಬಳಿಕ ಅಸಮಾಧಾನದ ಹೇಳಿಕೆಗಳು ನಮ್ಮ ಗಮನಕ್ಕೆ ಬಂದಿದೆ. ಎಲ್ಲರ ಹೇಳಿಕೆಗಳನ್ನೂ ಗಮನಿಸಿದ್ದೇವೆ, ಎಲ್ಲಾ ಮಾಹಿತಿ ನಮ್ಮ ಬಳಿಯಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah) ಪಕ್ಷದಲ್ಲಿ ಅಸಮಾಧಾನಿತ ನಾಯಕರಿಗೆ ವಾರ್ನಿಂಗ್ ಕೊಟ್ಟಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ (Bengaluru Palace Grounds) ನಡೆದ ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಮಾಜಿ ಸಚಿವ ಮಾಧುಸ್ವಾಮಿ ಸೇರಿದಂತೆ ಪ್ರಮುಖರು ಗೈರಾಗಿದ್ದರು. ಇದರಿಂದ ಆರಂಭದಲ್ಲೇ ಪಕ್ಷದ ಅಸಮಾಧಾನಿತ ನಾಯಕರಿಗೆ ಬಿಸಿ ಮುಟ್ಟಿಸಿದ್ದಾರೆ.

ಟಿಕೆಟ್ ಘೋಷಣೆ ಆದ ಬಳಿಕ ನಿಮ್ಮ ಅಸಮಾಧಾನದ ಹೇಳಿಕೆಗಳು ನಮ್ಮ ಗಮನಕ್ಕೆ ಬಂದಿದೆ. ಎಲ್ಲರ ಹೇಳಿಕೆಗಳನ್ನೂ ಗಮನಿಸಿದ್ದು ಎಲ್ಲಾ ಮಾಹಿತಿ ನಮ್ಮ ಬಳಿ ಇದೆ. ಟಿಕೆಟ್ ಅನ್ನು ಸಂಸದೀಯ ಮಂಡಳಿ ಸಭೆ ನಿರ್ಧಾರ ಮಾಡಿದೆ ಎಂದು ಹೇಳಿದ್ದಾರೆ.

ಸಂಸದೀಯ ಮಂಡಳಿಯಲ್ಲಿ ಮೋದಿ ಮತ್ತು ನಾನು ಸೇರಿದಂತೆ ಎಲ್ಲರೂ ಚರ್ಚೆ ಮಾಡಿ ತಿರ್ಮಾನ ಮಾಡಿದ್ದೇವೆ. ಟಿಕೆಟ್ ಘೋಷಣೆಯಾಗಿದೆ ಎಲ್ಲರೂ ಒಪ್ಪಿ ಅಭ್ಯರ್ಥಿ ಪರ ಪ್ರಚಾರ ಶುರು ಮಾಡಿ. ಯಾವುದೇ ಕಾರಣಕ್ಕೂ ಪಕ್ಷ ವಿರೋಧಿ ಚಟುವಟಿಕೆ ಮಾಡಬಾರದು. ನಿಮಗೆ ಮುಂದೆ ಒಳ್ಳೆ ಭವಿಷ್ಯ ಇದೆ. ಈಗ ಮೋದಿ ಮತ್ತೊಮ್ಮೆ ಪ್ರಧಾನಿ ಮಾಡುವುದೇ ನಮ್ಮ ಗುರಿಯಾಗಿರಬೇಕು ಎಂದು ಕರೆ ಕೊಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!