ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಬಿಗ್ ಬಾಸ್ ಮುಂದಿನ ಶೋ ನಲ್ಲಿ ಸುದೀಪ್ ನಿರೂಪಣೆ ಮಾಡಲ್ಲ ಎಂದು ಅನೌನ್ಸ್ ಮಾಡಿದ್ದರ ಬಗ್ಗೆ ‘ಬಿಗ್ ಬಾಸ್’ ಶೋ ನಿರ್ದೇಶಕ ಪ್ರಕಾಶ್ ಗೋಪಾಲಕೃಷ್ಣ ಅಸಲಿ ವಿಚಾರ ಬಿಚ್ಚಿಟ್ಟಿದ್ದಾರೆ.
‘ಬಿಗ್ ಬಾಸ್’ ಶೋ ಕುರಿತಾದ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಪ್ರಕಾಶ್ ಗೋಪಾಲಕೃಷ್ಣ, ಮುಂದಿನ ಸೀಸನ್ ಅವರೇ ಇರುತ್ತಾರೆ. ಸುದೀಪ್ ಸರ್ ಇಲ್ಲದೇ ಯೋಚನೆ ಮಾಡೋಕೆ ಆಗುತ್ತಾ? ಅವರನ್ನು ಒಪ್ಪಿಸುತ್ತೇವೆ. ಈ ಹಿಂದೆ 10 ಸೀಸನ್ ಸಾಕು ಅಂತ ಹೇಳಿದ್ದರು. ಈಗ ಮುಂದಿನ ಸೀಸನ್‌ಗೂ ಅವರನ್ನೇ ಕರೆ ತರುತ್ತೇವೆ. ಸುದೀಪ್ ಅವರನ್ನು ಬಿಟ್ಟು ಬೇರೆ ಅವರನ್ನು ಆಯ್ಕೆ ಮಾಡಿಕೊಳ್ಳುದಿಲ್ಲ. ಅವರನ್ನು ಒಪ್ಪಿಸುತ್ತೇವೆ. ಕಾದು ನೋಡಿ ಸುದೀಪ್ ಸರ್ ಇಲ್ಲದೇ ಬಿಗ್ ಬಾಸ್ ಇಲ್ಲ ಎಂದಿದ್ದಾರೆ.