ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಬಾರಿ ಲೋಕಸಭೆ ಚುನಾವಣೆಯಲ್ಲಿ 370ಕ್ಕೂ ಅಧಿಕ ಸ್ಥಾನಗಳೊಂದಿಗೆ ಎನ್‌ಡಿಎ ಅಧಿಕಾರಕ್ಕೆ ಬರುತ್ತದೆ ಎಂದು ಎಕ್ಸಿಟ್ ಪೋಲ್‌ನಲ್ಲಿ (Exit Poll) ಹೇಳಿದ್ದು, ಇದಕ್ಕೆ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಧ್ವನಿಯಾಗಿದ್ದು, ಮೋದಿ ಮತ್ತೆ ಪ್ರಧಾನಿಯಾಗುತ್ತಾರೆ ಎಂದು ಹೇಳಿದ್ದಾರೆ.
ಮಡಿಕೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೋದಿ (Modi) ಅವರ ಬ್ರ್ಯಾಂಡ್ ಕಡಿಮೆ ಆಗಿರಬಹುದು. ಮೋದಿಯನ್ನು ಇನ್ನಷ್ಟು ಜನರು ಪ್ರಶ್ನೆ ಮಾಡಬಹುದು, ಹೋರಾಟಗಳು ಸಹ ಹೆಚ್ಚಾಗಬಹುದು. ಆದ್ರೆ ಎಕ್ಸಿಟ್ ಪೋಲ್ ಅಂಕಿ-ಅಂಶಗಳ ಪ್ರಕಾರ ಎನ್‌ಡಿಎ ಅಧಿಕಾರಕ್ಕೆ ಬರುತ್ತೆ, ಮೋದಿಯೇ ಪ್ರಧಾನಿಯಾಗ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಚುನಾವಣೋತ್ತರ ಸಮೀಕ್ಷೆಗಳನ್ನು ನೋಡಿದ್ರೆ, ಎಲ್ಲಾ ಸಮೀಕ್ಷೆ ಒಂದೇ ರೀತಿಯಿದ್ದು, ಯಾವುದೇ ಗೊಂದಲಗಳು ಇರುವುದಿಲ್ಲ. ಸಮೀಕ್ಷೆಗಳು ಯಾವತ್ತಿಗೂ ತಪ್ಪಾಗುವುದಿಲ್ಲ. 2004ರ ಸಮೀಕ್ಷೆಯಲ್ಲಿ ದೊಡ್ಡ ಮಟ್ಟದಲ್ಲಿ ಬಿಜೆಪಿ ಬರುತ್ತದೆ ಅಂತ ಹೇಳಲಾಗಿತ್ತು. ಈ ಬಾರಿಯೂ ಬಿಜೆಪಿ 2019ರ ಚುನಾವಣೆಗಿಂತ ಹೆಚ್ಚಿನ ಫಲಿತಾಂಶ ಪಡೆಯಲಿದೆ, ಎನ್‌ಡಿಎ 350+ ಸ್ಥಾನಗಳನ್ನು ಪಡೆಯುತ್ತದೆ ಎಂದು ಹೇಳಿದ್ದಾರೆ.
ಈಗ ಮೋದಿ ಅವರ ಬ್ರ್ಯಾಂಡ್ ಕಡಿಮೆಯಾಗಿದೆ. 2014-2019ರಲ್ಲಿ ಇದ್ದ ಮೋದಿ ಅಲೆ ಈಗ ಇಲ್ಲ. ಆದ್ರೂ ಬಿಜೆಪಿ ದೊಡ್ಡ ಮಟ್ಟದ ಫಲಿತಾಂಶ ಬರಲಿದೆ. ಮಂಗಳವಾರದ ವರೆಗೆ ಕಾದು ನೋಡಬೇಕು ಎಂದು ಅವರು ತಿಳಿಸಿದ್ದಾರೆ.