ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಪ್ಘಾನಿಸ್ತಾನದ ಕ್ರಿಕೆಟ್ ಆಟಗಾರ ರಶೀದ್ ಖಾನ್‌ಗೆ ಟಾಟಾ ಸಮೂಹ ಸಂಸ್ಥೆಗಳ ಮುಖ್ಯಸ್ಥ ರತನ್ ಟಾಟಾ 10 ಕೋಟಿ ರೂ. ಬಹುಮಾನ ನೀಡುವುದಾಗಿ ಹೇಳಿದ್ದಾರೆ ಎಂಬ ಸುದ್ದಿ, ವದಂತಿಗಳಿಗೆ ಖುದ್ದು ಅವರೇ ತೆರೆ ಎಳೆದಿದ್ದಾರೆ.
ತಾನು ಯಾವುದೇ ಆಟಗಾರರಿಗೆ ದಂಡ ಅಥವಾ ಬಹುಮಾನದ ಬಗ್ಗೆ ಐಸಿಸಿ ಅಥವಾ ಯಾವುದೇ ಕ್ರಿಕೆಟ್ ಪ್ಯಾಕಲ್ಟಿಗೆ ಯಾವುದೇ ಸಲಹೆಗಳನ್ನು ನೀಡಿಲ್ಲ. ನನಗೂ ಕ್ರಿಕೆಟ್ಗೆ ಯಾವುದೇ ಸಂಬಂಧವಿಲ್ಲ ಎಂದು ಟ್ವಿಟರ್‌ನಲ್ಲಿ ಅವರು ಸ್ಪಷ್ಟಪಡಿಸಿದ್ದಾರೆ.
ಪಾಕ್ ವಿರುದ್ಧ ಗೆಲುವಿನ ಸಂಭ್ರಮಾಚರಣೆಯಲ್ಲಿ ರಶೀದ್ ಖಾನ್, ಭಾರತ ಧ್ವಜ ಪ್ರದರ್ಶಿಸಿದ್ದು, ಇದಕ್ಕಾಗಿ ಐಸಿಸಿ ರೂ. 50 ಲಕ್ಷ ದಂಡ ವಿಧಿಸಿದ ನಂತರ ಅವರಿಗೆ 10 ಕೋಟಿ ರೂ. ಬಹುಮಾನ ನೀಡುವುದಾಗಿ ಉದ್ಯಮಿ ರತನ್ ಟಾಟಾ ಪ್ರತಿಜ್ಞೆ ಮಾಡಿದ್ದಾರೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ