ಅವಧಿಪೂರ್ವ ಚುನಾವಣೆ ಆಗುವುದಿಲ್ಲ: ಜಗದೀಶ್ ಶೆಟ್ಟರ್

ಹೊಸದಿಗಂತ ವರದಿ, ಬಾಗಲಕೋಟೆ:

ರಾಜ್ಯದಲ್ಲಿ ಅವಧಿ ಪೂರ್ವ ಚುನಾವಣೆ ಆಗುವುದಿಲ್ಲ. ಏಪ್ರಿಲ್-ಮೇ ತಿಂಗಳಲ್ಲಿ ಚುನಾವಣೆ ಆಗಲಿದೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸಂಪುಟ ವಿಸ್ತರಣೆ ಸಿಎಂ  ಹಾಗೂ ವರಿಷ್ಠರಿಗೆ ಬಿಟ್ಟ ವಿಚಾರವಾಗಿದೆ ಎಂದರು.
ರಾಜ್ಯದಲ್ಲಿ ಗುಜರಾತ್ ಮಾದರಿಯಲ್ಲಿ ಯುವಕರಿಗೆ ಮಣೆ ಹಾಕುವ ವಿಚಾರ ಕುರಿತು ಮಾತನಾಡಿದ ಅವರು ಇದನ್ನೆಲ್ಲಾ ಮಾಧ್ಯಮದವರು ಮಾತ್ರ ಹೇಳುತ್ತಿದ್ದಾರೆ. ಗುಜರಾತ್ ಮಾದರಿ ರಾಜ್ಯದಲ್ಲಿ ನಡೆಯುತ್ತೆ ಎಂದು ಎಲ್ಲಿಯೂ ಯಾರೂ ಹೇಳಿಲ್ಲವಲ. ಪ್ರಧಾನಿ ಮೋದಿಯವರು, ನಡ್ಡಾ ಹೇಳಿದ್ದಾರಾ,. ನಮ್ಮ ಹಿರಿಯ ನಾಯಕರು ಹೇಳಿದ್ದರೆ ಹೇಳಿ ಎಂದು ಪ್ರಶ್ನಿಸಿದರು.
ವಿಶ್ವ ಮಟ್ಟದಲ್ಲಿ ಮೋದಿ ಅವರ ಪ್ರಬಲ ನಾಯಕತ್ವವಿದೆ. ಜಗತ್ತಿನ ಇತ್ತೀಚಿನ ಸಮೀಕ್ಷೆಗಳಲ್ಲಿ ಮೋದಿ ಹೆಸರು ಮುಂಚೂಣಿಯಲ್ಲಿದೆ. ವಿಶ್ವದ ನಾಲ್ಕೈದು ಜನ ಪ್ರಬಲ ನಾಯಕರಲ್ಲಿ ಮೋದಿ ಮೊದಲ ಸ್ಥಾನದಲ್ಲಿದ್ದಾರೆ.ಮೋದಿ ಅವರ ನಾಯಕತ್ವ ದೇಶಕ್ಕೆ ಮತ್ತು ಬಿಜೆಪಿ ಪಕ್ಷಕ್ಕೆ ಶಕ್ತಿಯಾಗಿದೆ ಎಂದರು.
ಹಿಮಾಚಲ ಪ್ರದೇಶದಲ್ಲೂ ನಮೋ ವರ್ಚಸ್ಸು ಇದೆ,ಈಡಿ ರಾಷ್ಟ್ರದಲ್ಲಿದೆ. ದೇಶದಲ್ಲಿ ಮೋದಿ ಅವರ ನಾಯಕತ್ವಕ್ಕೆ ಪರ್ಯಾಯ ನಾಯಕತ್ವವಿಲ್ಲ.ಬಿಜೆಪಿ ಪಕ್ಷ ಸಂಘಟನೆ ದೃಷ್ಠಿಯಿಂದಲೂ ಪರ್ಯಾಯವಾಗಿ ಪೈಪೋಟಿ ನೀಡುವ ರಾಷ್ಟ್ರೀಯ ಪಕ್ಷವಿಲ್ಲ. ದೇಶದ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಆಡಳಿತವಿದೆ ಎಂದರು.
ಜನಾರ್ಧನ ರೆಡ್ಡಿ ಹೊಸ ಪಕ್ಷ ರಚನೆ ವಿಚಾರ ಕುರಿತು ಪ್ರತಿಕ್ರಿಯಿಸಿ ಅದು ಅವರಿಗೆ ಬಿಟ್ಟ ವಿಚಾರವಾಗಿದೆ. ಅದರ ಬಗ್ಗೆ ನಾನು ಹೇಳುವುದಿಲ್ಲ. ಹಿಂದೆ ಅವರು ಬಿಜೆಪಿಯಲ್ಲಿದ್ದರು. ಬಿಜೆಪಿಯ ಅಭಿಮಾನಿ ಇದ್ದಾರೆ. ಅದಕ್ಕೆ ಪಕ್ಷದ ವರಿಷ್ಠರು ನಿಧರ್ಾರ ಕೈಗೊಳ್ಳುತ್ತಾರೆ ಎಂದರು.
ಶಾಸಕ ವೀರಣ್ಣ ಚರಂತಿಮಠ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!