ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೊಮೆಟೋ ಅಂದರೆ ಎಲ್ಲರೂ ಬೇಡವೇ ಬೇಡ ಅಂತಾರೆ.. ಅದಕ್ಕೆ ಕಾರಣ ಗಗನಕ್ಕೇರುತ್ತಿರುವ ಬೆಲೆ . ಇದೀಗ ಪಂಜಾಬ್ ಗವರ್ನರ್ (Punjab governor) ಮತ್ತು ಯುಟಿ ಆಡಳಿತಾಧಿಕಾರಿ ಬನ್ವಾರಿಲಾಲ್ ಪುರೋಹಿತ್ (Banwarilal Purohit) ಅವರು ರಾಜಭವನದಲ್ಲಿ ಮೆನುವಿನಲ್ಲಿ ಟೊಮೆಟೋ (tomatoes) ಬಳಕೆ ಬೇಡ ಎಂದು ಹೇಳಿದ್ದಾರೆ.
ಚಂಡೀಗಢದ ಚಿಲ್ಲರೆ ಮಾರುಕಟ್ಟೆಗಳಲ್ಲಿ, ಕೆಜಿಗೆ ₹ 250 ವರೆಗೆ ಮಾರಾಟವಾಗುತ್ತಿದೆ. ಅಪ್ನಿ ಮಂಡಿಗಳಲ್ಲಿ, ಬೆಲೆಗಳು ಪ್ರತಿ ಕೆಜಿಗೆ ₹ 180 ರಿಂದ ₹ 200 ರ ನಡುವೆ ಇರುತ್ತದೆ.
ಹೀಗಾಗಿ ಟೊಮೆಟೋ ಬಳಕೆಯನ್ನು ಕಡಿಮೆ ಮಾಡುವುದರಿಂದ ಅವುಗಳ ಏರುತ್ತಿರುವ ಬೆಲೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ರಾಜ್ಯಪಾಲರು ಹೇಳಿದ್ದು ಸದ್ಯಕ್ಕೆ ಪರ್ಯಾಯಗಳನ್ನು ಬಳಸಲು ಜನರಿಗೆ ಮನವಿ ಮಾಡಿದ್ದಾರೆ.
ಆಹಾರ ಪದಾರ್ಥಗಳ ಬೆಲೆ ಏರಿಕೆಯ ಪರಿಣಾಮವನ್ನು ಎದುರಿಸುತ್ತಿರುವ ಪಂಜಾಬ್ನ ನಾಗರಿಕರಿಗೆ ಒಗ್ಗಟ್ಟಿನ ಸೂಚಕವಾಗಿ ಟೊಮೆಟೋ ಸೇವನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸುವ ನಿರ್ಧಾರವನ್ನು ರಾಜ್ಯಪಾಲರು ತೆಗೆದುಕೊಂಡಿದ್ದಾರೆ ಎಂದು ರಾಜಭವನದ ಹೇಳಿಕೆ ತಿಳಿಸಿದೆ.
ಒಂದು ವಸ್ತುವಿನ ಬಳಕೆಯನ್ನು ನಿಲ್ಲಿಸುವುದು ಅಥವಾ ಕಡಿಮೆ ಮಾಡುವುದು ಅದರ ಬೆಲೆಯ ಮೇಲೆ ಪರಿಣಾಮ ಬೀರುತ್ತದೆ. ಬೇಡಿಕೆಯನ್ನು ಕಡಿಮೆ ಮಾಡುವುದರಿಂದ ಅದರ ಬೆಲೆ ತನ್ನಿಂದತಾನೇ ಬೆಲೆ ಕಡಿಮೆಯಾಗುತ್ತದೆ. ಜನರು ಸದ್ಯಕ್ಕೆ ತಮ್ಮ ಮನೆಯಲ್ಲಿ ಪರ್ಯಾಯಗಳನ್ನು ಬಳಸುತ್ತಾರೆ. ಇದು ಟೊಮೆಟೋಬೆಲೆಗಳ ಏರಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಪುರೋಹಿತ್ ಹೇಳಿದ್ದಾರೆ.
ಅದೇ ರೀತಿ ನಿಮ್ಮ ಮನೆಯಲ್ಲಿ ಟೊಮೆಟೋ ಸೇವನೆಯನ್ನು ತ್ಯಜಿಸುವ ಮೂಲಕ, ರಾಜ್ಯಪಾಲರು ಈ ಸವಾಲಿನ ಸಮಯದಲ್ಲಿ ಸಹಾನುಭೂತಿ, ಮಿತವ್ಯಯ ಮತ್ತು ಸಂಪನ್ಮೂಲಗಳ ಜವಾಬ್ದಾರಿಯುತ ಬಳಕೆಯ ಮಹತ್ವವನ್ನು ಒತ್ತಿಹೇಳುವ ಗುರಿಯನ್ನು ಹೊಂದಿದ್ದಾ ಎಂದು ಹೇಳಿಕೆ ತಿಳಿಸಿದೆ.