ಸಿಎಎಯಿಂದ ಯಾವೊಬ್ಬ ಭಾರತೀಯನು ಪೌರತ್ವ ಕಳೆದುಕೊಳ್ಳುವುದಿಲ್ಲ: ರಾಜನಾಥ ಸಿಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಯಿಂದ ಯಾವೊಬ್ಬ ಭಾರತೀಯನು ಪೌರತ್ವ ಕಳೆದುಕೊಳ್ಳುವುದಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದ್ದಾರೆ .

ಅಭ್ಯರ್ಥಿ ಪರ ತಮಿಳುನಾಡಿನ ನಾಮಕ್ಕಲ್ ಲೋಕಸಭಾಕ್ಷೇತ್ರದಲ್ಲಿ ರೋಡ್ ಶೋ ನಡೆಸಿದ ಅವರು, ರಾಮಮಂದಿರ ಸೇರಿದಂತೆ ಕಳೆದ ಚುನಾವಣೆಯಲ್ಲಿ ಜನರಿಗೆ ನೀಡಿದ ಭರವಸೆಗಳನ್ನು ಬಿಜೆಪಿ ಜಾರಿಗೆ ತಂದಿದೆ ಎಂದರು.

ಸಿಎಎ ಜಾರಿಗೆ ತರುತ್ತೇವೆ ಎಂದು ಭರವಸೆ ನೀಡಿದ್ದೆವು. ಇದೀಗ ಜಾರಿ ಮಾಡಿದ್ದೇವೆ. ಯಾವುದೇ ಧರ್ಮದ ಹೆಣ್ಣು ಮಗಳು ನಮ್ಮ ಮನೆಯ ಹೆಣ್ಣು ಮಗಳಿದ್ದಂತೆ. ಅವಳಿಗಾಗುವ ನೋವು ನಮಗೂ ನೋವುಂಟು ಮಾಡುತ್ತದೆ. ಅದಕ್ಕಾಗಿಯೇ ತ್ರಿವಳಿ ತಲಾಖ್‌ ಅನ್ನು ರದ್ದುಗೊಳಿಸಿದೆವು. ಪೌರತ್ವ ಕಾಯ್ದೆ ಕುರಿತಂತೆ ಕಾಂಗ್ರೆಸ್‌-ಡಿಎಂಕೆ ಗೊಂದಲ ಸೃಷ್ಟಿಸುತ್ತಿವೆ. ಸಿಎಎಯಿಂದ ದೇಶದ ಪ್ರಜೆಯೊಬ್ಬ ಆತ ಹಿಂದು, ಮುಸ್ಲಿಂ, ಕ್ರೈಸ್ತ, ಜೈನ ಯಾವುದೇ ಆಗಿರಲಿ, ಪೌರತ್ವ ಕಳೆದುಕೊಳ್ಳುವುದಿಲ್ಲ ಎಂದರು.

‘ಭಾರತವು ಇನ್ನು ಮುಂದೆ ದುರ್ಬಲ ರಾಷ್ಟ್ರವಲ್ಲ. ದೇಶದ ಸೇನೆ, ವಾಯುಪಡೆ ಮತ್ತು ನೌಕಾಪಡೆಯ ಮೇಲೆ ನಮಗೆ ಬಲವಾದ ವಿಶ್ವಾಸವಿದೆ. ಯಾರಾದರೂ ಕಣ್ಣು ರೆಪ್ಪೆ ಅಲ್ಲಾಡಿಸಿದರೆ, ನಮ್ಮ ಸೇನೆಯು ಅವರಿಗೆ ತಕ್ಕ ಉತ್ತರವನ್ನು ನೀಡಲು ಸಿದ್ಧವಾಗಿದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!