Wednesday, August 17, 2022

Latest Posts

ವಿಶ್ವದ ಯಾವುದೇ ನ್ಯಾಯಾಂಗವು ಭಾರತದಷ್ಟು ಸ್ವತಂತ್ರವಾಗಿಲ್ಲ: ಕೇಂದ್ರ ಸಚಿವ ಕಿರಣ್‌ ರಿಜಿಜು

ಹೊಸದಿಗಂತ ಡಿಜಿಟಲ ಡೆಸ್ಕ್:‌
“ವಿಶ್ವದ ಯಾವುದೇ ನ್ಯಾಯಾಂಗವು ಭಾರತದಷ್ಟು ಸ್ವತಂತ್ರವಾಗಿಲ್ಲ” ಎಂದು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.

ಭಾರತದ ನ್ಯಾಯಾಂಗ ವ್ಯವಸ್ಥೆ ಕುರಿತು ಮಾತನಾಡಿದ ಅವರು “ಭಾರತದ ನ್ಯಾಯಾಧೀಶರು ಮತ್ತು ನ್ಯಾಯಾಂಗವು ಸಂಪೂರ್ಣವಾಗಿ ಸಂರಕ್ಷಿಸಲ್ಪಟ್ಟಿದೆ ಮತ್ತು ಯಾವುದೇ ನ್ಯಾಯಾಧೀಶರು ಅಥವಾ ನ್ಯಾಯಾಂಗವು ಭಾರತದಲ್ಲಿರುವಂತೆ ವಿಶ್ವದ ಎಲ್ಲಿಯೂ ಸ್ವತಂತ್ರವಾಗಿಲ್ಲ ಎಂದು ನಾನು ಸ್ಪಷ್ಟವಾಗಿ ಹೇಳಬಲ್ಲೆ” ಎಂದು ಅವರು ಹೇಳಿದ್ದಾರೆ.

ನಿನ್ನೆಯಷ್ಟೇ ಭಾರತದ ಮುಖ್ಯ ನ್ಯಾಯಮೂರ್ತಿಗಳಾದ ಸಿಜೆಐ ರಮಣ ಅವರು “ಕಾಂಗರೂ ನ್ಯಾಯಾಲಯಗಳು” ಮತ್ತು “ಪಕ್ಷಪಾತದ ದೃಷ್ಟಿಕೋನಗಳು” ಮಾಧ್ಯಮಗಳು ಪ್ರಚಾರ ಮಾಡುತ್ತಿರುವುದು ನ್ಯಾಯ ವಿತರಣೆಯ ಮೇಲೆ ಪರಿಣಾಮ ಬೀರುತ್ತಿದೆ ಎಂದು ಟೀಕಿಸಿದ್ದರು. ಈ ಕುರಿತು ಪ್ರತಿಕ್ರಿಯೆಯನ್ನು ನಿರಾಕರಿಸಿದ ರಿಜಿಜು ಅವರು ” “ಸಿಜೆಐ ರಮಣ ಅವರು ವಿದ್ಯುನ್ಮಾನ ಮತ್ತು ಸಾಮಾಜಿಕ ಮಾಧ್ಯಮಗಳಿಂದ ಮಾಧ್ಯಮ ಪ್ರಯೋಗದ ಕುರಿತು ಮಾಡಿದ ಕಾಮೆಂಟ್‌ಗಳು ಭಾರತದಲ್ಲಿ ಮತ್ತು ವಿಶ್ವದಾದ್ಯಂತ ಇರುವ ಪರಿಸ್ಥಿತಿಗೆ ಅನುಗುಣವಾಗಿ ಅವರ ಅವಲೋಕನವಾಗಿದೆ. ಯಾರಾದರೂ ಹಾಗೆ ಭಾವಿಸಿದರೆ ನಾವು ಇದನ್ನು ಸಾರ್ವಜನಿಕವಾಗಿಯೇ ಚರ್ಚಿಸಬಹುದು ಮತ್ತು ಅವರು ಈಗ ಏನು ಹೇಳಿದ್ದಾರೆ ಎಂಬುದರ ಕುರಿತು ನಾನು ಪ್ರತಿಕ್ರಿಯಿಸಲು ಬಯಸುವುದಿಲ್ಲ” ಎಂದು ಹೇಳಿ ಮೇಲಿನ ಮಾತುಗಳನ್ನಾಡಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

ಈ ನಡುವೆ ಸಿಜೆಐ ರಮಣ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್, ಮಾಧ್ಯಮ ಸಂಸ್ಥೆಗಳು ತಮ್ಮ ಕಾರ್ಯಚಟುವಟಿಕೆಗಳ ಆತ್ಮಾವಲೋಕನಕ್ಕೆ ಕರೆ ನೀಡಿದ್ದಾರೆ.  ದೆಹಲಿಯ ಆಲ್ ಇಂಡಿಯಾ ರೇಡಿಯೊದಲ್ಲಿ ನಡೆದ ರಾಷ್ಟ್ರೀಯ ಪ್ರಸಾರ ದಿನದ ಕಾರ್ಯಕ್ರಮದಲ್ಲಿ, ರಮಣ ಅವರ ಹೇಳಿಕೆಗಳು ಮಾಧ್ಯಮಗಳ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸುದ್ದಿ ನೀಡುವಾಗ ನಾವು ‘ಲಕ್ಷ್ಮಣ ರೇಖೆ’ವನ್ನು ದಾಟಿದ್ದೇವೆಯೇ ಎಂಬುದನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಠಾಕೂರ್ ಹೇಳಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!