ಯಾವುದೇ ನಾಯಕರು ವಿದೇಶದಲ್ಲಿ ನಮ್ಮ ದೇಶವನ್ನು ಅವಹೇಳನ ಮಾಡಬಾರದು: ಅಮಿತ್ ಶಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಯಾವುದೇ ನಾಯಕರು ವಿದೇಶದಲ್ಲಿ ನಮ್ಮ ದೇಶವನ್ನು ಅವಹೇಳನ ಮಾಡಬಾರದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಹೇಳಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ವಿದೇಶ ಪ್ರವಾಸದ ವೇಳೆ ಭಾರತದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ ಮತ್ತು ದೇಶದ ಆಂತರಿಕ ರಾಜಕೀಯದ ಕುರಿತು ಚರ್ಚಿಸುತ್ತಿದ್ದಾರೆ ಎಂದು ಶಾ ಆರೋಪಿಸಿದ್ದಾರೆ.

ಗುಜರಾತ್ನ ಪಟಾನ್ ಜಿಲ್ಲೆಯ ಸಿದ್ಧಪುರದಲ್ಲಿ ಮೋದಿ ಆಡಳಿತದ 9ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅಮಿತ್ ಶಾ, ಯಾವುದೇ ನಾಯಕರು ವಿದೇಶದಲ್ಲಿ ನಮ್ಮ ದೇಶವನ್ನು ಅವಹೇಳನ ಮಾಡಬಾರದು. ಕಾಂಗ್ರೆಸ್ ನಾಯಕರು ತಮ್ಮ ಪೂರ್ವಜರಿಂದ ಸಲಹೆ ಪಡೆಯಬೇಕು ಎಂದು ಸಲಹೆ ನೀಡಿದರು.

ಒಬ್ಬ ನಾಯಕ ವಿದೇಶದಲ್ಲಿ ತನ್ನ ದೇಶವನ್ನು ಅವಹೇಳನ ಮಾಡುವುದು ಸರಿಯಲ್ಲ. ರಾಷ್ಟ್ರದ ಪ್ರಜೆಗಳು ಅವರನ್ನು ಗಮನಿಸುತ್ತಿದ್ದಾರೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು ಎಂದು ರಾಹುಲ್ ಗಾಂಧಿಗೆ ತಿರುಗೇಟು ನೀಡಿದ್ದಾರೆ.

‘ಯಾವುದೇ ದೇಶಭಕ್ತರು ಭಾರತದೊಳಗೆ ದೇಶದ ರಾಜಕೀಯವನ್ನು ಚರ್ಚಿಸಬೇಕು. ಯಾವುದೇ ರಾಜಕೀಯ ಪಕ್ಷದ ನಾಯಕರು ವಿದೇಶ ಪ್ರವಾಸ ಕೈಗೊಂಡಾಗ ನಮ್ಮ ದೇಶದ ರಾಜಕೀಯದ ಬಗ್ಗೆ ಚರ್ಚೆ, ಟೀಕೆ ಮಾಡುವುದು ಸೂಕ್ತವಲ್ಲ.’ರಾಹುಲ್ ಬಾಬಾ, ಇಡೀ ದೇಶ ನಿಮ್ಮನ್ನು ಗಮನಿಸುತ್ತಿದೆ ಎಂಬುದನ್ನು ನೆನಪಿಡಿ’ ಎಂದು ಅಮಿತ್ ಶಾ ವಾಗ್ದಾಳಿ ನಡೆಸಿದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!