ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಲವು ದಿನಗಳ ಹಿಂದೆ ಸಲಿಂಗ ವಿವಾಹಕ್ಕೆ (Same Sex Marraige) ಕಾನೂನು ಮಾನ್ಯತೆ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಪಂಚಸದಸ್ಯ ಪೀಠ ತೀರ್ಪು ನೀಡಿತ್ತು. ಈ ಬಗ್ಗೆ ಪರ-ವಿರೋಧದ ಚರ್ಚೆ ನಡೆಯುತ್ತಿದೆ.
ಇದೀಗ ನಟಿ ಲಕ್ಷ್ಮಿ ಮಂಚು (Lakshmi Manchu) ಕೂಡ ಪ್ರತಿಕ್ರಿಯೆ ನೀಡಿದ್ದಾರೆ.
ಸಲಿಂಗ ವಿವಾಹವನ್ನು ಕಾನೂನು ಬದ್ಧಗೊಳಿಸಲು ಸುಪ್ರೀಂ ಕೋರ್ಟ್ ತೀರ್ಪು ನನಗೆ ನಿರಾಸೆಗೊಳಿಸಿದೆ. ನನ್ನ ಹೃದಯ ಒಡೆದಿದೆ. ಎಲ್ಲಾ ರೀತಿಯ ಪ್ರೀತಿಯನ್ನು ಸ್ವೀಕರಿಸುವ, ಪ್ರಪಂಚದಲ್ಲಿನ ಪ್ರೀತಿಯ ಬಗ್ಗೆ ಬೋಧಿಸಿದ ದೇಶಕ್ಕೆ ಇದು ನಿಜವಾಗಿಯೂ ಅವಮಾನ ಎಂದಿದ್ದಾರೆ.
ಅವರು ಬೇರೆ ದೇಶಗಳಲ್ಲಿ ಸ್ವತಂತ್ರವಾಗಿ ಬದುಕುತ್ತಾರೆ. ನಮ್ಮ ದೇಶದಲ್ಲಿ ಅವರ ಮದುವೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲವೇ? ಎಂದು ಬರೆದುಕೊಂಡಿದ್ದಾರೆ. ನಟಿಯ ಈ ಟ್ವೀಟ್ ಸಖತ್ ವೈರಲ್ ಆಗುತ್ತಿದೆ.
ಕಳೆದ ವರ್ಷ ‘ಮಾನ್ಸ್ಟರ್’ (Monster) ಎಂಬ ಚಿತ್ರದಲ್ಲಿ ಲಕ್ಷ್ಮಿ ಮಂಚು ಲೆಸ್ವಿಯನ್ ರೋಲ್ ನಟಿಸಿದ್ದರು. ಚಿತ್ರದಲ್ಲಿನ ಹನಿ ರೋಸ್- ಲಕ್ಷ್ಮಿ ಮಂಚು ಲಿಪ್‌ಲಾಕ್ ದೃಶ್ಯಗಳು ಸಖತ್ ವೈರಲ್ ಆಗಿತ್ತು.